ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವಾರಾತ್ರಿ ಉತ್ಸವದ ಕೊನೆಯ ದಿನದಂದು ದೇವಳದ ವತಯಿಂದ ಚಂಡಿಕಾ ಹೋಮ ನೆರವೇರಿತು. ದೇವಳದ ಅರ್ಚಕರಾದ ನಾರಾಯಣ ಭಟ್, ಕೆ. ರಾಮ್ ಭಟ್, ಪರಮೇಶ್ವರ ಭಟ್, ಆದರ್ಶ ಭಟ್, ಪರ್ದಕಂಡ ವಾಸುದೇವ ಭಟ್, ಮಾಧವ ಮಯ್ಯ ಪೂಜಾಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತಮೊಕ್ತೇಸರ ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಮಕ್ತೇಸರರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಕೃಷ್ಣ ಕುಮಾರ್ ಪೂಂಜ, ಕ್ರಷ್ಣ ರಾಜ್ ಮಾರ್ಲ ಉಪಸ್ಥಿತರಿದ್ದರು.


