ಬಂಟ್ವಾಳ : ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇತ್ತೀಚೆಗೆ ನಡೆದ ಸೌತ್ ಝೋನ್ ಟ್ವೆಕಾಂಡೋ ಓಪನ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನಿವಾಸಿ ಅಬ್ದುಲ್ ಕರೀಂ-ಫಾತಿಮಾ ದಂಪತಿಯ ಪುತ್ರ ಯೂಸುಫ್ ಹಫೀಝ್ 44 ಕೆಜಿ ವಿಭಾಗದ ಫೈಟಿಂಗ್‍ನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುತ್ತಾರೆ.

ಈತ ಮಂಗಳೂರು-ಕರಾವಳಿ ಕಾಲೇಜಿನ ದ್ವಿತೀಯ ವರ್ಷದ ಏರೋನಾಟಿಕಲ್ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈತನಿಗೆ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಸಂಸ್ಥೆಯ ತರಬೇತುದಾರ ಇಸಾಕ್ ನಂದಾವರ ತರಬೇತಿ ನೀಡಿದ್ದಾರೆ.
