ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಿಂದ ದಡಿಕೆ ಮಾರು ವರೆಗೆ ಸುಮಾರು 1 ಕೋ.ರೂ.ವೆಚ್ಚದಲ್ಲಿ ಅಭಿವೃದ್ದಿಗೊಳ್ಳಲಿರುವ ರಸ್ತೆಗೆ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕೇಸ್ತರರಾದ ಸಚಿನ್ ರೈ ಮಾಣಿ ಗುತ್ತು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,
ಗ್ರಾಮ ಪಂಚಾಯತ್ ಅಧ್ಯಕ್ಷ ಮಮತಾ ಎಸ್. ಶೆಟ್ಟಿ ಉಪಾಧ್ಯಕ್ಷೆ ಸಂಪಾವತಿ , ಸದಸ್ಯರಾದ ನಾರಾಯಣಶೆಟ್ಟಿ ತೋಟ ಗಣೇಶ ರೈ, ಲಲಿತ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪುಷ್ಪರಾಜ್ ಚೌಟ, ಕಾರ್ಯದರ್ಶಿ ಹರೀಶ್ ಕುಲಾಲ್ ಮಾಣಿ , ಮಾಣಿ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ವಿಟ್ಲ ಪ್ರಖಂಡ ಹಿಂದು ಜಾಗರಣವೇದಿಕೆ ಅಧ್ಯಕ್ಷ ನರಸಿಂಹಶೆಟ್ಟಿ, ಮತ್ತು ಪ್ರಮುಖರಾದ ಬಾಬು ಶೆಟ್ಟಿ ತೋಟ, ನಾರಾಯಣಭಟ್ಟ್ ಬಪ್ಪುಕೋಡಿ. ಜಗದೀಶ್ ಆಚಾರ್ಯ, ರತ್ನಾಕರ ರೈ ಅಶೋಕ್ ಶೆಟ್ಟಿ, ಪ್ರತಾಪ್ ಆಳ್ವ, ಮುತ್ತಪ್ಪ ಪೂಜಾರಿ ರಾಜೇಶ್ ಕುಲಾಲ್ ಕೊಪ್ಪಳ, ಕೇಶವ ಹರೀಶ್ ಶೆಟ್ಟಿ, ನಾಗೇಶ್, ಜಯಂತ, ರವಿ ದಡಿಕೆ ಮಾರು, ಸಂದೀಪ್, ಮಂಜು ಸಾಲಿಯಾನ್ ಕೋಡಿ ಫ್ರೆಂಡ್ಸ್ ನ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಸದಾಶಿವ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
