ಬಂಟ್ವಾಳ: ಯಾವುದೇ ಸಂದರ್ಭದಲ್ಲೂ ಕಾನೂನು ಕೈಗೆತ್ತಿಕೊಳ್ಳಬೇಡಿ.. ಅದಕ್ಕೆ ನಾವಿದ್ದೇವೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸ, ಅದನ್ನು ನಾವು ಮಾಡುತ್ತೇವೆ.. ಹೀಗೆ ಕಟುವಾಗಿ ಕಿವಿಮಾತು ಹೇಳಿದ್ದಾರೆ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್.

ಶನಿವಾರ ಬಂಟ್ವಾಳ ನಗರ ಠಾಣೆಯಲ್ಲಿ ನವರಾತ್ರಿ ಹಾಗೂ ಬಕ್ರೀದ್ ಹಬ್ಬದ ಕುರಿತಾಗಿ ಆಯೋಜಿಸಲಾದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಹಬ್ಬಗಳು ಸಂಭ್ರಮದಿಂದ ನಡೆಯಬೇಕು, ಸಮುದಾಯಗಳ ನಡುವೆ ಚಿಕ್ಕಚಿಕ್ಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಪರಿಹರಿಸಿಕೊಳ್ಳಬೇಕು, ಬೇಧಮರೆತು ಶಾಂತಿಯ ವಾತಾವರಣ ನಿಮರ್ಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ಹಬ್ಬಗಳು ಯುದ್ದವಾದೀತು ಎಂದವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಧರ್ಮಗಳ ನಾಯಕರು ತಮ್ಮ ತಮ್ಮ ಹಬ್ಬಗಳ ಆಚರಣೆಗೆ ಸೂಕ್ತಬಂದೋಬಸ್ತ್ ಒದಗಿಸುವಂತೆ ಕೋರಿದರು. ಬಂಟ್ಬಾಳ ವೃತ್ತನಿರೀಕ್ಷಕ ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್, ಅಪರಾಧ ವಿಭಾಗದ ಉಪನಿರೀಕ್ಷಕ ಚಂದ್ರಶೇಖರಯ್ಯ ಉಪಸ್ಥಿತರಿದ್ದರು. ವಿವಿಧ ಧರ್ಮಗಳು ಮುಖಂಡರು ಭಾಗವಹಿಸಿದ್ದರು.ಪ್ರಮುಖರಾದ ಪುರುಷ ಸಾಲ್ಯಾನ್, ಪುರಸಭಾ ಸದಸ್ಯ ಮೊನಿಶ್ ಆಲಿ, ದೇವಿಪ್ರಸಾದ್ ಪೂಂಜಾ, ಯತೀನ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
