ಬಂಟ್ವಾಳ : ಕಾಶ್ಮೀರಕ್ಕೆ ವಿಧಿಸಲಾದ ವಿಶೇಷ ಸ್ಥಾನಮಾನ 370ನೇ ಹಾಗೂ 35ಎ ರದ್ಧುಗೊಳಿಸುವಂತೆ ಬಂಟ್ವಾಳದ ಜಕ್ರಿಬೆಟ್ಟು ನಿವಾಸಿಯೊಬ್ಬರು ನಿರಂತರವಾಗಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದರು.ಇವರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಪ್ರಶಂಸಾಪತ್ರ ಬಂದ್ದಿದ್ದು,ಅದನ್ನು ಮಂಗಳವಾರ ಅವರಿಗೆ ಹಸ್ತಾಂತರಿಸಲಾಯಿತು. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ಲಕ್ಷ್ಮೀನಾರಾಯಣ ಅವರು ಕಾಶ್ಮೀರಕ್ಕೆ ವಿಧಿಸಲಾದ ವಿಶೇಷ ಸ್ಥಾನಮಾನ 370 ನೇ ಹಾಗೂ 35 ನೇ ವಿಧಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರಧಾನಿಯವರಿಗೆ ಪತ್ರ ಬರೆದು ಗಮನಸೆಳೆದಿದ್ದರು. ಇದೀಗ ಕೇಂದ್ರ ಸರಕಾರ ಕಾಶ್ಮೀರಕ್ಕೆ ವಿಧಿಸಲಾದ ವಿಶೇಷ ಸ್ಥಾನಮಾನ ರದ್ದುಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಆ.21 ರಂದು ಲಕ್ಷ್ಮೀನಾರಾಯಣ ಅವರಿಗೆಪ್ರಶಂಸಾಪತ್ರ ಬಂದಿದೆ. ಪತ್ರದ ಮೇಲ್ಗಡೆಯಲ್ಲಿ ಅಶೋಕಚಕ್ರದ ಲಾಂಛನವಿದ್ದು,ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಬಗ್ಗೆ ಪತ್ರದಲ್ಲಿ ಅಂಗ್ಲಭಾಷೆಯಲ್ಲಿ ಉಲ್ಲೇಖಿಸಲಾಗಿದೆ.
ಕೊನೆಯಲ್ಲಿ ಪ್ರಧಾನಿಯವರ ಹಸ್ತಾಕ್ಷರವು ಇದೆ. ಈಪತ್ರಕ್ಕೆ ಪೋಟೋ ಪ್ರೇಮ್ ಹಾಕಿ ಮಂಗಳವಾರ ಬಿ.ಸಿ.ರೋಡಿನ ರಂಗೋಲಿ ಹೊಟೇಲ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನದ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹಸ್ತಾಂತರಿಸಿದರು.ನಿವೃತ್ತ ಸೇನಾನಿ ರಾಮಯ್ಯ ಶೆಟ್ಟಿ ಸಂಪಿಲ , ರಾಷ್ಟ್ರೀಯ ಏಕತಾ ಅಭಿಯಾನದ ಸಂಚಾಲಕ ಸತೀಶ್ ಕುಂಪಲ, ಸಹಸಂಚಾಲಕಿ ಪೂಜಾ ಪೈ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ,ರಾಮದಾಸ್ ಬಂಟ್ವಾಳ ಮೊದಲಾದವರಿದ್ದರು.ಸಾಮಾಜಿಕ ಕಾರ್ಯಕರ್ತರಾಗಿರುವಲಕ್ಷ್ಮೀನಾರಾಯಣ ಅವರು ವಿದ್ಯುತ್ ಗುತ್ತಿಗೆದಾರರಲ್ಲದೆ ರೈಲ್ವೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯು ನಿರಂತರ ರೈಲ್ವೆ ಅಧಿಕಾರಿಗಳು ,ಸಚಿವರಿಗೆ ಗಮನಸೆಳೆಯುತ್ತಿದ್ದಾರೆ.ಈಗ ಕಾಶ್ಮೀರಕ್ಕೆ ವಿಧಿಸಲಾದ ವಿಶೇಷ ಸ್ಥಾನಮಾನ ರದ್ದತಿಯ ಕುರಿತಾಗಿ ತಮ್ಮ ಪತ್ರಕ್ಕೆ ಸ್ಪಂದಿಸಿ ಖುದ್ದು ಪ್ರಧಾನಿಯವರಿಂದ ಲಿಖಿತ ಉತ್ತರ ಕೈಸೇರಿರುವುದರಿಂದ ಖುಷಿಗೊಂಡಿದ್ದಾರೆ.

