ಬಂಟ್ವಾಳ: ತಾಲೂಕಿನ ಕಾವಳಮೂಡೂರು ಗ್ರಾಮ ಪಂಚಾಯತ್ನಲ್ಲಿ ಪಂಚಾಯತ್ ಅಭಿವೃದ್ಧಿ ಅಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಲಿರುವ ಗಣಪತಿ ಮುಚ್ಚಿನ್ನಾಯ ಮತ್ತು ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆದ್ದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರ ಸಮ್ಮಾನ ಕಾರ್ಯಕ್ರಮದ ಮುನ್ನ ಕೆದ್ದಳಿಕೆ ಹಿ.ಪ್ರಾ.ಶಾಲೆಯಿಂದ ಕಾವಳಕಟ್ಟೆ ಶ್ರೀ ರಾಜನ್ದೈವ ಕೊಡಮಣಿತ್ತಾಯ ದೈವಸ್ಥಾನದ ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು.

ವಿವಿಧ ಬ್ಯಾಂಡ್ ವಾದನ, ನಾಸಿಕ್ ಬ್ಯಾಂಡ್, ಕಲ್ಲಡ್ಕ ಶಿಲ್ಪ ಗೊಂಬೆ ಬಳಗದವರಿಂದ ಗೊಂಬೆ ಮತ್ತು ನವಿಲು ನೃತ್ಯಗಳು,ಕೊಂಬು, ವಿವಿಧ ವೇಷ ಭೂಷಣಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ತೆರೆದ ಜೀಪಿನಲ್ಲಿ ಆಕರ್ಷಕ ಮೆರವಣಿಗೆಯಲ್ಲಿ ಸಮ್ಮಾನಿತರನ್ನು ಕರೆತರಲಾಯಿತು.





