ಮೂಡುಬಿದಿರೆ: ಜವನೆರ್ ಬೆದ್ರ ಸಂಘಟನೆಯ ಕ್ಲೀನ್ ಅಪ್ ಮೂಡುಬಿದಿರೆ 81ನೇ ವಾರದ ಸ್ವಚ್ಛತಾ ಅಭಿಯಾನದ ಅಂಗವಾಗಿ ಮೂಡುಬಿದಿರೆಯಲ್ಲಿರುವ ಬೆಂಕಿ ಬಸದಿ, ಚೋಳ ಶೆಟ್ಟರ ಬಸದಿ ಹಾಗೂ ಮಹಾದೇವ ಶೆಟ್ಟರ ಬಸದಿ ವಠಾರವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು.

ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಮರ್ ಕೋಟೆ ಮಾತನಾಡಿ, ಜೈನಕಾಶಿ ಮೂಡುಬಿದಿರೆಯ 18 ಬಸದಿಗಳ ಪೈಕಿ ಒಟ್ಟು ಆರು ಬಸದಿಗಳನ್ನು ನಾವು ಕ್ಲೀನ್ ಅಪ್ ಮೂಡುಬಿದಿರೆ ಅಭಿಯಾನದ ಮೂಲಕ ಸ್ವಚ್ಛಗೊಳಿಸಿದ್ದೇವೆ. ನಿರಂತರವಾಗಿ ನಡೆದ ಅಭಿಯಾನವು 81 ವಾರಗಳನ್ನು ಪೂರೈಸಿದ್ದು, ನಮ್ಮ ಜೊತೆ ಸೇರಿದ ಸಂಘ ಸಂಸ್ಥೆಗಳಿಗೆ ಚಿರಋಣಿ ಎಂದರು. ಪುರಸಭಾ ಸದಸ್ಯೆ ಶ್ವೇತಾಕುಮಾರಿ, ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಸಹಿತ ಜವನೆರ್ ಬೆದ್ರ ಸದಸ್ಯರು ಉಪಸ್ಥಿತರಿದ್ದರು
