ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ 31 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಪರಿಸರ ಸ್ನೇಹಿ ಅಭಿಯಾನವು ಸೆ.21ರಂದು ಮಲ್ಪೆ ಕಡಲ ತೀರದಲ್ಲಿ ನಡೆಯಿತು. ಪರಿಸರದ ಮೇಲೆ ಪ್ಲಾಸ್ಟಿಕ್ ನಿಂದ ಆಗುವ ಹಾನಿಯನ್ನು ಅಂಕಿಅಂಶಗಳ ಸಹಿತ ವಿವರಿಸುವ ಮಾಹಿತಿಯನ್ನು ಒಳಗೊಂಡಿರುವ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಬಳಿಕ ಕಡಲ ಕಿನಾರೆಯಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು.
IMG_20190922_090600
ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ, ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್, ಸಂದೀಪ್ ಶೆಟ್ಟಿ, ಕೆ.ಎಂ.ಸಿ ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
Attachments area

 

By suddi9

Leave a Reply

Your email address will not be published. Required fields are marked *