ಬೆಂಗಳೂರು: ಹದಿನೆಂಟು ವರ್ಷಗಳ ಹಿಂದಿನ ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ತಪ್ಪಿತಸ್ಥೆ ಎಂದು ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯ ಸೆ.27ರಂದು ಶನಿವಾರ ತೀರ್ಪ ನೀಡಿದೆ. ಇದರೊಂದಿಗೆ ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ಮುಖ್ಯಮಂತ್ರಿಯ ಕಾನೂನು ಹೋರಾಟಕ್ಕೆ ತೆರೆಬಿದ್ದಿದೆ.
ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ಚಾರಿತ್ರಿಕ ತೀಪು ನೀಡಿ ಜಯಲಲಿತಾ ತಪ್ಪಿತಸ್ಥೆ ಎಂದು ತೀರ್ಪು ನೀಡಿದರು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇನ್ನೂ ಪ್ರಕಟಿಸಿಲ್ಲ. ಜಯಲಲಿತಾ ಜೊತೆಗೆ ಇತರರನ್ನೂ ತಪ್ಪಿತಸ್ಥರು ಎಂದು ಹೇಳಿರುವ ನ್ಯಾಯಾಲಯ ಅಕ್ರಮವಾಗಿ ಆಸ್ತಿ ಗಳಿಸಿದ್ದು ಸಾಬೀತಾಗಿದೆ ಎಂದು ಹೇಳಿದೆ.

