ಕೈಕಂಬ:ನಾರಾಯಣಗುರು ಯುವವೇದಿಕೆ ಮಂಗಳೂರು ಹಾಗೂ ಎಂ.ಶಶಿಧರ್ ಅಭಿನಂದನಾ ಸಮಿತಿ ಅಭಿನಂದನಾ ಕೃತಿ ಪರಿಚಯ ಹಾಗೂ ನಾರಾಯಣ ಗುರು ಜಯಂತಿ ಕಾರ್ಯಕ್ರಮವು ಸೆ.15 ರಂದು ಬೆಳಿಗ್ಗೆ 9.30ರಿಂದ 11.30ರ ವರೆಗೆ ನಡೆಯಲಿದೆ.

ಉದ್ಘಾಟನೆಯನ್ನು ಮಾಜಿ ಕಾರ್ಪೋರೇಟರ್ ಮೀರಾ ಅಶೋಕ್ ಕುಮಾರ್ ಮಾಡಲಿದ್ದಾರೆ. ಹೊಸದಿಗಂತ ಕನ್ನಡ ದಿನ ಪತ್ರಿಕೆ ಹಿರಿಯ ವರದಿಗಾರರಾದ ಗುರುವಪ್ಪ ಯನ್ ಟಿ. ಕೃತಿ ಪರಿಚಯ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ನಾರಾಯಣ ಗುರು ವೇದಿಕೆ ಮಂಗಳೂರು ಇದರ ಅಧ್ಯಕ್ಷರು ಲೋಹಿತ್ ಪಜೀರ್ ವಹಿಸಲಿರುವರು. ರಥಬೀದಿ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಶೇಷಪ್ಪ ಅಮೀನ್ ಗುರು ಸಂದೇಶ ನೀಡಲಿದ್ದಾರೆ. ಪತ್ರಕರ್ತ ಮೋಹನ್ದಾಸ್ ಮರಕಡ, ಭರತ್ ರಾಜ್ ಸೊರಕೆ ಹಾಗೂ ನಾರಾಯಣ ಗುರು ಯುವವೇದಿಕೆ ಮಂಗಳೂರು ಇದರ ಸಲಹಾ ನಿರ್ದೇಶಕರು , ಸರ್ವಸದಸ್ಯರು ಭಾಗವಹಿಸಲಿದ್ದಾರೆ.
