ಕೋಲಾರ: ಗುಣಮಟ್ಟದ ಸೇವೆಯನ್ನು ನಗುಮುಖದಿಂದ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವಂತಾಗಬೇಕು ಎಂದು ಭಾರತ್ ಪೆಟ್ರೋಲಿಯಂ ಸೌತ್ ಜೋನ್(ರೀಟೈಲ್) ಮುಖ್ಯಸ್ಥ ಇಂದ್ರಜಿತ್ ಸಿಂಗ್ ಹೇಳಿದರು.ನಗರದ ಬೈಪಾಸ್‍ನಲ್ಲಿರುವ ಕೋಗಿಲಹಳ್ಳಿಯ ಭಾರತ್ ಪೆಟ್ರೋಲಿಯಂನ ಅಬ್ದುಲ್ ರಜಾಕ್ ಪೆಟ್ರೋಲ್ ಬಂಕ್ ಪುನರಾರಂಭದ ಅಂಗವಾಗಿ ನಡೆದ ಗ್ರಾಹಕರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೂರುಗಳು ಇಲ್ಲದಂತೆ ಪಾರದರ್ಶಕವಾಗಿ ಇಂಧನವನ್ನು ಒದಗಿಸುವ ಮೂಲಕ ಗ್ರಾಹಕ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದರು.
ಭಾರತ್ ಪೆಟ್ರೋಲಿಯಂ(ರೀಟೈಲ್) ಕರ್ನಾಟಕದ ಮುಖ್ಯಸ್ಥ ಸಂಜೀವ್ ಕುಮಾರ್ ಮಾತನಾಡಿ, ಪ್ರಸ್ತುತ ಆರಂಭಿಕ ಕೊಡುಗೆಯಾಗಿ ಶೇ.20 ರಷ್ಟು ಎಲ್ಲ ರೀತಿಯ ಇಂಜಿನ್ ಆಯಿಲ್ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನೂತನ ಟ್ರ್ಯಾಕ್ಟರ್, ಟಿಲ್ಲರ್‍ಗಳನ್ನು ಪ್ರದರ್ಶನಕ್ಕೆ ಇಡುವ ಜತೆಗೆ ರಸಗೊಬ್ಬರ, ನಾನಾ ಬೆಳೆಗೆ ಉಪಯೋಗಿರುವ ಔಷಧೋಪಚಾರ, ಡ್ರಿಪ್ ಇರಿಗೇಷನ್ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಆಸಕ್ತರಿಗೆ ರಿಯಾಯಿತಿ ದರದಲ್ಲಿ ಜಮೀನಿಗೆ ತೆಗೆದುಕೊಂಡು ಹೋಗಿ ಸರಬರಾಜು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗ್ರಾಹಕರು ಇಂಧನವನ್ನು ಹಾಕಿಸಿಕೊಂಡ ನಂತರ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಿದರೆ ಈ ಸಂಬಂಧ ತನಿಖೆ ನಡೆಸಿ ಗ್ರಾಹಕರಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಭಾರತ್ ಪೆಟ್ರೋಲಿಯಂ ಜಿಲ್ಲಾ ವ್ಯವಸ್ಥಾಪಕ(ಮಾರಾಟ) ಹರಿಪ್ರಸಾದ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು, ಡಾ.ಶಂಕರ್ ಇದ್ದರು.
