ಕೈಕಂಬ:ದ.ಕ.ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಪ್ರಾಥಮಿಕ ಆರೋಗ್ಯಕೇಂದ್ರ ಗಂಜಿಮಠ ಮತ್ತು ಗ್ರಾಮಪಂಚಾಯತ್ ಮುತ್ತೂರು ಇದರ ಜಂಟಿ ಸಹಭಾಗೀತ್ವದಲ್ಲಿ ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆಯಡಿಯಲ್ಲಿ ಶಿಶುಪ್ರದರ್ಶನ ಕಾರ್ಯಕ್ರಮವು ಮುರಸೈಟ್ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.

7vp shishu pradarshana
ಕಿರಿಯ ಆರೋಗ್ಯ ಸಹಾಯಕಿ ಅನುಷಾ ಶಿಶುಗಳಿಗೆ ಸ್ತನ್ಯಪಾನದ ಮಹತ್ವ ಮತ್ತು ತೂಕ ಅಪೌಷ್ಟಿಕತೆ ಚುಚ್ಚುಮದ್ದು ನೀಡುವ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಮೇಲ್ವಿಚಾರಕಿ ಉಷಾ ಡಿ.ಯವರು ಲಿಂಗಾಣುಪಾತ, ಪ್ರಸವ ಪೂರ್ವ ಲಿಂಗ ಪತ್ತೆ, ಭ್ರೂಣಹತ್ಯೆ ನಿಷೇಧ, ಅಲ್ಲದೆ ಮಾತೃಪೂರ್ಣ, ಮಾತೃವಂದನಾ ಹಾಗೂ ಮಾತೃಶ್ರೀ ಯೋಜನೆಗಳ ಬಗ್ಗೆ ವಿವರಿಸಿದರು.ಪಂಚಾಯತ್ ಅಧ್ಯಕ್ಷೆ ನಾಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಶುಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪಿ.ಡಿ.ಒ ವಸಂತಿ, ಪಂಚಾಯತ್ ಸದಸ್ಯರುಗಳಾದ ಸರಸ್ವತಿ, ತಾರಾನಾಥ, ಜಗದೀಶ್ ದುರ್ಗಾಕೋಡಿ ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಅನುಷಾ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *