ಕೈಕಂಬ : ಕಂದಾವರ ಗ್ರಾಮ ಪಂಚಾಯತ್ನ 2018-19ರ ಸಾಲಿನ `ವಾರ್ಷಿಕ ಜಮಾ-ಬಂಧಿ’ ಕಾರ್ಯಕ್ರಮ ಇತ್ತಿಚೇಗೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಪಂಚಾಯತ್ನ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಒ) ಯಶವಂತ್ ಜಮಾ-ಬಂಧಿಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ತೆರಿಗೆ ವಸೂಲಿ, ಅನುದಾನ ಬಳಕೆ ಗ್ರಾಪಂನಿಂದ ಕಾರ್ಯಗತಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡಿದ ಪಿಡಿಒ, ಪಂಚಾಯತ್ ವಿದ್ಯುತ್ ಮತ್ತು ದಾರಿದೀಪ ಬಿಲ್ ಮೊತ್ತ 81 ಲಕ್ಷ ರೂ ಬಾಕಿ ಉಳಿದಿದೆ ಎಂದವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ, ಕೃಷ್ಣ ಕೋಟ್ಯಾನ್ ಹಾಗೂ ಸುಧಾಕರ ಕುಮಾರ್ ಕೇಳಿದ ಸಂಶಯಾಸ್ಪದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿ ರಾಜಶ್ರೀ ನೋಡೆಲ್ ಅಧಿಕಾರಿಯಾಗಿದ್ದು, ಗ್ರಾಮಸ್ಥರ ಕೆಲವು ಆಕ್ಷೇಪ ಪಟ್ಟಿ ಮಾಡಿಕೊಂಡರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ದೇವೇಂದ್ರ, ಜಿಪಂ ಕಿರಿಯ ಇಂಜಿನಿಯರ್ ಪ್ರದೀಪ್ ಉಪಸ್ಥಿತರಿದ್ದರು.ಜಮಾ-ಬಂಧಿ ಕಾರ್ಯಕ್ರಮದಲ್ಲಿ ಪಂಚಾಯತ್ನ ಹಲವು ಸದಸ್ಯರು, ಜಮಾಬಂಧಿ ಲೆಕ್ಕಾಧಿಕಾರಿ ಚಂದ್ರಶೇಖರ ಹಾಗೂ ಗ್ರಾಮಸ್ಥರು ಹಾಜರಿದ್ದರು.
