ಕೈಕಂಬ : ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ವಲಯದ ತೆಂಕಬೆಳ್ಳೂರು ಒಕ್ಕೂಟದ ಶಿವನಿಧಿ ಸ್ವ-ಸಹಾಯ ಸಂಘವು ಇಲ್ಲಿನ ಶ್ರೀ ಆದಿಶಿಕ್ತಿ ದೇವಸ್ಥಾನದ ಬಳಿ ಮಳೆಕೊಯ್ಲು ಯೋಜನೆಗೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ಕೇಶವ, ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ಜನಾರ್ದನ. ಶ್ರೀ ಆದಿಶಕ್ತಿ ದೇವಸ್ಥಾನದ ಆಡಳಿತಗಾರ ಸಂದೀಪ್, ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ, ಸೇವಾ ಪ್ರತಿನಿಧಿ ರೂಪಾಶ್ರೀ ನಾರಾಯಣ ಹಾಗೂ ಶಿವನಿಧಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
