ಬಂಟ್ವಾಳ: ಬಂಟ್ವಾಳ ನಗರ ಠಾಣೆಯಲ್ಲಿ ಸೇವೆ ಸಲ್ಲಿಸಿ ಇದೀಗ ವಿವಿಧ ಠಾಣೆಗೆ ವರ್ಗಾವಣೆ ಹೊಂದಿರುವ ಸಿಬ್ಬಂದಿ ಗಳಿಗೆ ಬೀಳ್ಕೋಡುಗೆ ಕಾರ್ಯಕ್ರಮ ಬಿಸಿರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು.ಬಂಟ್ವಾಳ ನಗರ ಠಾಣೆ ಯ ಅಪರಾಧ ವಿಭಾಗದ ಎಸ್.ಐ.ಅಗಿ ಸೇವೆ ಸಲ್ಲಿಸಿ ಸುಳ್ಯ ಠಾಣೆಗೆ ವರ್ಗಾವಣೆಗೊಂಡಿರುವ ಹರೀಶ್  ಸೇರಿದಂತೆ ಬೇರೆಬೇರೆ ಠಾಣೆಗಳಿಗೆ ವರ್ಗಾವಣೆ ಗೊಂಡಿರುವ ಸುಮಾರು 12 ಸಿಬ್ಬಂದಿ ಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು.2
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿ ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರು ದ.ಕ.ಜಿಲ್ಲೆಯ ಲ್ಲಿ ಅದರಲ್ಲೂ ಬಂಟ್ವಾಳ ವೃತ್ತದಲ್ಲಿ ಕೆಲಸ ಮಾಡುವ ಪ್ರತಿ ಪೋಲೀಸ್ ಅಧಿಕಾರಿಗಳು ಬುದ್ಧಿವಂತ ರು  ಎಂದು ಹೇಳಿದರು.ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಯೂ ಒತ್ತಡ ದ ಮಧ್ಯೆಯೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಅಧಿಕಾರಿ ಸಿಬ್ಬಂದಿ ಗಳು ಹೊರ ಜಿಲ್ಲೆಗೆ ಹೋದರು ವಿಶೇಷ ಗೌರವ ಇದೆ ಎಂದು ಅವರು ಹೇಳಿದರು.5
ವರ್ಗಾವಣೆ ಮತ್ತು ನಿವೃತ್ತಿ ಎಂಬುದು ಸರಕಾರಿ ಉದ್ಯೋಗ ದಲ್ಲಿ ಮಾಮೂಲಿ ಆದರೆ ಅ ಸಂದರ್ಭದಲ್ಲಿ ನ ಸ್ನೇಹ ಮತ್ತು ಕಾರ್ಯ ವೈಖರಿ ಜೀವನದಲ್ಲಿ ಪ್ರಮುಖ ಘಟ್ಟವಾಗಿರುತ್ತದೆ ಎಂದು ಹೇಳಿದರು.3 (3)
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕೃಷ್ಣ ಕುಮಾರ್ ಪೂಂಜಾ ಹಾಗೂ ಪೋಲೀಸ್ ಇಲಾಖೆಗೆ ಕಲ್ಯಾಣ ಮಂಟಪ ಕ್ಕಾಗಿ ಒಂದು ಎಕರೆ ಜಮೀನು ಗುರುತಿಸಿ ರೆಕಾರ್ಡ್ ಮಾಡಲು ಸಹಕಾರ ನೀಡಿದ ಮಹಮ್ಮದ್ ನಂದಾವರ ಹಾಗೂ ಸದಾಶಿವ ಪ್ರಭು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.1 (3)
6
7
7
4 (1)ವೇದಿಕೆಯಲ್ಲಿ ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜಾ, ಮಹಮ್ಮದ್ ನಂದಾವರ, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ಬಂಟ್ವಾಳ ‌ನಗರ ಠಾಣಾ ಅಪರಾಧ ವಿಭಾಗದ ಎಸ್‌.ಐ.ಸುಧಾಕರ ತೋನ್ಸೆ ಪ್ರೋಬೆಸನರಿ ಎಸ್.ಐ.ಗಳಾದ ನಾಗೇಶ್, ವಿನಾಯಕ್  ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಪ್ರಸ್ತಾವಿಕವಾಗಿ ಮಾತನಾಡಿ ದರು. ನಗರ ಠಾಣಾ  ನಾಗರಾಜ್ ಸ್ವಾಗತಿಸಿ  ನಾಗರಾಜ್ ವಂದಿಸಿದರು.ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *