ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅರಳ ಗ್ರಾಮ ಪಂಚಾಯತ್ ವಲಯ ಮಟ್ಟದ “ಪಂಚಾಯತ್ ಮಿಲನ 2019” ಕಾರ್ಯಕ್ರಮ ಕುಟ್ಟಿಕಲ ಜಂಕ್ಷನ್ ನಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ಉದ್ಘಾಟಿಸಿ ಪಕ್ಷದ ಕಾರ್ಯಕರ್ತರು ಪಕ್ಷದ ಸಂಘಟಣೆ ಹಾಗೂ ಬಲವರ್ದನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮಖಾಂತರ ಮುಂದಿನ ಪಂಚಾಯತ್ ಚುಣಾವಣೆಗೆ ಸನ್ನದ್ದರಾಗುವಂತೆ ವಿನಂತಿಸಿದರು. ವಿಧಾನ ಸಭೆ ಹಾಗೂ ಲೋಕ ಸಭೆ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ವಿರೋಧ ಪಕ್ಷದ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರು ಪಕ್ಷದ ದೊಡ್ಡ ಆಸ್ತಿಯಾಗಿದ್ದು ಶಿಸ್ತಿನಿಂದ ಪಕ್ಷ ಸಂಘಟಣೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ವಿಧಾನ ಸಭೆ ಹಾಗೂ ಲೋಕ ಸಭೆ ಚುನಾವಣೆಯ ಮತಗಳ ಅಂಕಿ ಅಂಶವನ್ನು ಕಾರ್ಯಕರ್ತರ ಮುಂದೆ ಮಂಡಿಸಿ ಪಕ್ಷದ ಹಿನ್ನಡೆಯ ಬಗ್ಗೆ ಗಂಭೀರವಾಗಿ ಚರ್ಚಿಸಿದರು. ಪಕ್ಷದ ಮುಖಂಡರಾದ ಜಗದೀಶ್ ಕೊಯಿಲಾ, ರಮೇಶ್ ನಾಯಕ್ ರಾಯಿ, ರಿಯಾಜ್ ಹುಸೈನ್ ಬಂಟ್ವಾಳ, ದೇವಪ್ಪ ಕರ್ಕೆರ ಕರ್ಪೆ ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರಚಿಸಿ ಅರಳ ಗ್ರಾಮ ಪಂಚಾಯತಿ ಸಮಿತಿಯ ಅದ್ಯಕ್ಷರಾಗಿ ಅಶ್ರಪ್ ಕುಟ್ಟಿಕಲ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಬೂತ್ ಸಮಿತಿಯ ಅದ್ಯಕ್ಷರಾಗಿ ಪುರಂದರ ಶೆಟ್ಟಿ, ಸಂತೋಷ್ ಜೋಯ್ ಪಿಂಟೊ, ಉಸ್ಮಾನ್, ಹನೀಪ್ ಇವರನ್ನು ಅಯ್ಕೆಮಾಡಲಾಯಿತು. ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜೈಸನ್ ಲೋಬೊ, ಮಹಿಳಾ ಅಧ್ಯಕ್ಷರಾಗಿ ಶಶಿಕಲಾ ಇವರನ್ನು ಆಯ್ಕೆಮಾಡಲಾಯಿತು. ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬೂತ್ ಸಮಿತಿಯ ಅದ್ಯಕ್ಷ ಉಸ್ಮಾನ್ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಎಂ. ಬಿ ಅಶ್ರಪ್ ದನ್ಯವಾದಗೈದರು.

By suddi9

Leave a Reply

Your email address will not be published. Required fields are marked *