ಬಂಟ್ವಾಳ:ಕನ್ನಡ ಭಾಷಾಭಿಮಾನಿಯಾಗಿ ಕನ್ನಡಕ್ಕೆ ಕುತ್ತು ಬಂದಾಗೆಲ್ಲಾ ತನ್ನ ಅಭಿಪ್ರಾಯಗಳನ್ನು ಬರೆದು ಸಾರ್ವಜನಿಕರೊಂದಿಗೆ ಸಂವಾದಕ್ಕೆ ತೊಡಗುತ್ತಿದ್ದ ಏರ್ಯರು ಶಿಕ್ಷಣ ,ಸಹಕಾರ ಕ್ಷೇತ್ರಗಳಲ್ಲಿ ದುಡಿದು ಸಾಹಿತ್ಯ ಸಾಂಸ್ಕøತಿಕ , ರಾಜಕೀಯ ,ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಾತನಾಡ ಬಲ್ಲ ಜ್ಞಾನಭಂಡಾರ ಅವರದಾಗಿರತ್ತು. ಹಿರಿಯ ತಲೆ ಮಾರಿನ ಸಾಹಿತಿÀಗಳೊಂದಿಗೆ ನಿಕಟಸಂಪರ್ಕಗಳನ್ನು ಇಟ್ಟುಕೊಂಡಿದ್ದರು. ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶಿಯಾಗಿ ಸ್ಪೂರ್ತಿಯಾಗಿದ್ದರು ಎಂದು ಬಂಟ್ವಾಳ ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ, ಪ್ರಾಂಶುಪಾಲೆ ಡಾ. ನಾಗವೇಣಿ ಮಂಚಿ ಹೇಳಿದರು.

ಅವರು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರ ನಿಧನಕ್ಕೆ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಬಿ.ಸಿ.ರೋಡಿನ ಅನ್ನಪೂಣೇಶ್ವರಿ ದೇವಸ್ಥಾನದ ವಠಾರದಲ್ಲಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ ಏರ್ಯರು ಬಹುಮುಖ ಪ್ರತಿಭೆಯಿಂದ ಸಮಾಜಕ್ಕೆ ಮಾರ್ಗದರ್ಶಿ ವ್ಯಕ್ತಿತ್ವವನ್ನು ನೀಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸ್ನೇಹ ಸೇತುವಾಗಿ ಎಲ್ಲರೊಡನೆ ಸಂಪರ್ಕದಲ್ಲಿದ್ದು ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಮಾನವೀಯ ಸ್ಪರ್ಶವನ್ನು ನೀಡಿದ್ದಾರೆ ಎಂದು ಏರ್ಯರಿಗೆ ಶೃದ್ಧಾಂಜಲಿ ನುಡಿಗಳನ್ನು ಸಮರ್ಪಿಸಿದರು.
ದೀಪಿಕಾ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ ಏರ್ಯರು ಸಹಕಾರಿ ಕೇತ್ರದಲ್ಲಿ ಗುರುತಿಸಲ್ಪಟ್ಟು ಸರಳ ನಡೆ ನುಡಿಯಿಂದ ಎಲ್ಲರಿಂದಲೂ ಗೌರವಿಸಲ್ಪಟ್ಟಿದ್ದ ಶಿಸ್ತಿನ ವ್ಯಕ್ತಿತ್ವ ಅವರದು ಎಂದರು.ನಿವೃತ್ತ ಪುಸರಭಾ ಅಧಿಕಾರಿ ಜಿ.ಶಿವಶಂಕರ್ ನಂದಾವರ,ಕನ್ನಡ ಭವನ ನಿರ್ಮಣ ಸಮಿತಿಯ ಸಂಚಾಲಕ ಕೊಳಕೆ ಗಂಗಾಧರ ಭಟ್ , ಸುಂದರ ರಾವ್ ನೇಸರ ಬಿ.ಸಿ.ರೋಡು ಮಾತನಾಡಿ ಏರ್ಯರು ಕನ್ನಡ ಸಾಹಿತ್ಯ ಪರಿಷತ್ತಿಗೆ ನಿಕಟವಾಗಿದ್ದು ಮಾರ್ಗದರ್ಶಿಯಾಗಿದ್ದರು. ಅವರ ಆತ್ಮೀಯ ವ್ಯಕ್ತಿತ್ವವನ್ನು ಕಳೆದುಕೊಂಡತ್ತಾಗಿದೆ ಎಂದು ನುಡಿ ನಮನ ಸಲ್ಲಿಸಿದರು.
