ಬಂಟ್ವಾಳ : ಜೈನ್ ಮಿಲನ್ ಆಶ್ರಯದಲ್ಲಿ ಜರಗುವ 13ನೇ ವರ್ಷದ ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮವು ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್ ರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರ ದಲ್ಲಿ ಜರಗಿತು. ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ರಿಗೆ ಸಂತಾಪ ಸೂಚಿಸಲಾಯಿತು.

KAR_2517ಕಾಡಬೆಟ್ಟು ಗ್ರಾಮದಲ್ಲಿ ಕಂಬಳದ ಕೋರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ವೀರ್ ರಾಜವರ್ಮ ಅಜ್ರಿ, ದೈವ ನೇಮೋತ್ಸವ ಭೂತಾರಾಧನೆಯಲ್ಲಿ ಪಾರಿ ಹೇಳುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ನಾಲೂರು ಮಾಗಣೆಗುತ್ತು ರತ್ನಾಕರ ಕೊಂಡೆ, ತು ಳು ನಾಡ ಕಲೆ ಸಂಸ್ಕøತಿ ಜಾನಪದವನ್ನು ಮೈಗೂಡಿಸಿಕೊಂಡ ಸಂಗಬೆಟ್ಟಿನ ಪ್ರೇಮಮ್ಮ , ಜೈನ ಅಡುಗೆ ತಯಾರಿಸುವ ಪಾಕ ಶಾಸ್ತ್ರ ಪ್ರವೀಣ ಬಾಳ್ತಿಲ ಸನತ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.

KAR_2509

ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ವಲಯ-8ರ ಅಧ್ಯಕ್ಷ ಕೆ.ಪುಷ್ಪರಾಜ ಜೈನ್ , ಮಾಜಿ ಸಚಿವ ಬಿ.ರಮಾನಾಥ ರೈ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಅಧ್ಯಕ್ಷ ಧನ್ಯ ಕುಮಾರ್ ರೈ ಬಿಳಿಯೂರು, ವಲಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಜೈನ್ ಉಪಸ್ಥಿತರಿದ್ದರು. ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು.
ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ವಂದಿಸಿದರು. ವಿನಯ ಕುಮಾರ್ ಮತ್ತು ಸುಜಾತಾ ಭರತ್ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು.
ಸುಮಾರು 105 ಮನೆಗಳಿಂದ ಮನೆಯಲ್ಲಿ ತಯಾರಿಸಿ ತಂದ ಜೈನರ ಪಾರಂಪಾರಿಕ ತಿಂಡಿ ತಿನಿಸುಗಳನ್ನು ಪ್ರದರ್ಶನವಿಟ್ಟು ಸವಿಯಲು ಅವಕಾಶ ಮಾಡಿಕೊಡಲಾಯಿತು.
ಮಿಲನ ಸದಸ್ಯರಿಂದ ತು ಳುನಾಡ ಜಾನಪದ ವಿವಿಧ ಸಾಂಸ್ಕøತಿಕ ವೈವಿಧ್ಯ ಜರಗಿತು.

By suddi9

Leave a Reply

Your email address will not be published. Required fields are marked *