ಮರಗಿಡಗಳು ಇದ್ದರೆ ಮಾತ್ರ ನಮ್ಮ ಬದುಕು ಹಸನಾಗುವುದು.ಪರಿಸರ ಸಂವರ್ಧನೆಯುಕೃಷಿಯಅಭಿವೃದ್ಧಿ ಹಾಗೂ ನಿರಂತರ ಪ್ರಗತಿಗೆ ಪೂರಕವಾಗಿದೆ. ನಾವು ಜಾಗೃತರಾಗಿ ಪರಿಸರ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆಇದೆಎಂದುಮಜಿಲ ಗುತ್ತುರಾಮದಾಸ್‍ಕೋಟ್ಯಾನ್‍ಅವರು ತಿಳಿಸಿದರು.

ACT-Vanamahotsava
ಶ್ರೀ ರಾಮದಾಸ್‍ಕೋಟ್ಯಾನ್‍ಅವರುಇತ್ತೀಚೆಗೆ ಅರ್ಕುಳ ಚಾರಿಟೇಬಲ್ ಟ್ರಸ್ಟ್‍ಆಶ್ರಯದಲ್ಲಿಆಯೋಜಿತವಾದ ಪರಿಸರಜಾಗೃತಿಅಭಿಯಾನವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆಯ ಬಗ್ಗೆ ವಿಶೇಷ ಒಲವು ಮೂಡುವಂತೆ ಮಾಡುವುದು ಇಂದಿನ ತುರ್ತುಅಗತ್ಯ.ತಾವು ಬದುಕುವ ನೆಲ ಜಲವನ್ನು ಗೌರವಿಸಿ, ಹಿತ ಮಿತವಾಗಿ ಬಳಸುವ ಪ್ರಜ್ಞಾವಂತಿಕೆ ನಮ್ಮದಾದಾಗ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲುಎಡೆಯಾಗಬಹುದುಎಂದುಬಂಟ್ವಾಳದ ಬಿಎಸ್ಸೆನ್ನೆಲ್ ಮಾರುಕಟ್ಟೆಅಧಿಕಾರಿ ಕಂಪ ಸದಾನಂದ ಆಳ್ವÀ ಅವರುಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿಅರ್ಕುಳ ಚಾರಿಟೇಬಲ್ ಟ್ರಸ್ಟ್ ಸದಸ್ಯ ಅರ್ಕುಳ ಬೀಡುರತ್ನರಾಜ ಶೆಟ್ಟಿ, ತುಪ್ಪೆಕಲ್ಲು ಉಮೇಶ ಸೇಮಿತ, ಅರ್ಕುಳ ಲೋಕಯ್ಯ ಪೂಜಾರಿ, ಅರ್ಕುಳ ದ್ವಾರ ಸಮಿತಿಯ ಸಂಯೋಜಕತುಪ್ಪೆಕಲ್ಲುರಘುನಾಥ ಪೂಜಾರಿ, ಅರ್ಥಶಾಸ್ತ್ರ ಪ್ರಾಧ್ಯಾಪಕಡಾ.ಎ.ಜಯಕುಮಾರ ಶೆಟ್ಟಿಅರ್ಕುಳ ಚಾರಿಟೇಬಲ್ ಟ್ರಸ್ಟ್ ಮೇಲ್ವಿಚಾರಕ ಮಂಟಮೆ ದಿನಕರಕರ್ಕೇರಾ, ತುಪ್ಪೆಕಲ್ಲುಉದಯಕುಮಾರ್, ಉಳಿದೊಟ್ಟು ಮನೋಹರ್, ಮಂಟಮೆ ಸೇಸಪ್ಪಕರ್ಕೇರಾ, ಧರ್ಮಗಿರಿ ಕೇಶವಕರ್ಕೇರಾ, ಗೋಪಾಲ ಸಪಲಿಗ, ಮಾದಿಂಗಲ ಲಕ್ಷ್ಮಣ ಹಾಗೂ ಅರ್ಕುಳ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಸ್ವಸಹಾಯ ಗುಂಪುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *