ಕೈಕಂಬ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವøಈ ದೇವಸ್ಥಾನದಲ್ಲಿ ಏಳು ದಿನಗಳ ಅಖಂಡ ಭಜನಾ ಸಪ್ತಾಹವು ಇಂದು ಗುರುವಾರ ಸಂಪನ್ನಗೊಂಡಿತು. ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಹಾಗೂ ಹೊರ ರಾಜ್ಯ ಮಹಾರಾಷ್ಟ್ರದಿಂದಲು ಭಜನಾತಂಡಗಳು ಆಗಮಿಸಿದ್ದು ಇಲ್ಲಿಯ ವಿಷೇಶತೆ. ಸಪ್ತಾಹದಲ್ಲಿ ಸುಮಾರು ನೂರಅರ್ವತ್ತು ಭಜನಾತಂಡಗಳನ್ನು ಆಹ್ವಾನಿಸಿ ದಿನವೊಂದರಂತೆ ಇಪತ್ತನಾಲ್ಕು ತಂಡಗಳಿಗೆ ಭಜನೆ ಮಾಡಲು ಇಲ್ಲಿನ ರಾಜರಾಜೇಶ್ವರೀ ಭಜನಾಮಂಡಳಿಯು ಅವಕಾಶಮಾಡಿಕೊಟ್ಟಿತು.
ಅಖಂಡ ಭಜನಾ ಸಪ್ತಾಹದ ಕೋನೆಯ ದಿನದಂದು ಬೆಳಗ್ಗೆ ಓಕುಳಿಯೊಂದಿಗೆ ಶ್ರೀ ರಾಜರಾಜೇಶ್ವರೀ ತಂಡದ ಸದಸ್ಯರು ಮಂಗಲೋತ್ಸವದಲ್ಲಿ ರಾಜರಾಜೇಶ್ವರೀ ಮಾತೃಸಂಘ ಹಾಗೂ ಆಸುಪಾಸಿನ ಹಲವಾರು ಭಜನಾಮಂಡಳಿಗಳ ತಂಡಗಳು ಪಾಲ್ಗೊಂಡಿದ್ದವು.ಈ ಭಾರಿಯ ವಿಶೇಷತೆಯೆಂದರೆ ದ.ಕ ಜಿಲ್ಲೆಯಲ್ಲಿ ಸರಿಯಾಗಿ ಮಳೆ ಭಾರದೆ ಬರ ಎದುರಿಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು . ಪೊಳಲಿಯಲ್ಲಿ ಭಜನಾ ಸಪ್ತಾಹ ಪ್ರಾರಂಭವಾಗುತ್ತಿದ್ದಂತೆ ಜಿಲ್ಲಾದ್ಯಾಂತ ಎಡೆಬಿಡದೆ ಮಳೆ ಸುರಿಯಾಲಾರಂಬಿಸಿತು. ಇದು ಇಲ್ಲಿನ ಭಕ್ತಜನರಿಗೆ ಸಂತಸಉಂಟುಮಾಡಿದೆ.



