ಬಂಟ್ವಾಳ: ತಾಲೂಕಿನ ಬೆಳ್ಳೂರು ವಲಯದ ಬಂಟರ ಸಂಘದ ಆಟಿದ ಕೂಟವು ಜು. 28ರಂದು ಭಾನುವಾರ ಬೆಳ್ಳೂರು ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಗ್ಗೆ 10ರಿಂದ ಸಂಜೆ 6 ರ ತನಕ ನಡೆಯಲಿದೆ.ಕರಿಯಂಗಳ, ಬಡಗಬೆಳ್ಳೂರು,ತೆಂಕಬೆಳ್ಳೂರು,ಕೂರಿಯಾಳ, ಅಮ್ಮುಂಜೆ ಗ್ರಾಮದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ತರಗತಿಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಕಾರ್ಯಕ್ರಮಗಳು:
ಮಧ್ಯಾಹ್ನ 2 ರಿಂದ ಆಟೋಟ ಸ್ಪರ್ಧೆಗಳು : ಕಬ್ಬಡ್ಡಿ, ಹಗ್ಗಜಗ್ಗಾಟ,ಒಂದುಕಾಲಿನ ಓಟ,ಮತ್ತು ಲಕ್ಕೀ ಗೇಮ್ ನಡೆಯಲಿದೆ. ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ ಬೆಳ್ಳೂರು ಇದರ ಯುವ ಕಲಾವಿದರಿಂದಪುಷ್ಪರಾಜ ಶೆಟ್ಟಿ ಕಮ್ಮಾಜೇ ಇವರ ನಿರ್ಧೇಶನದಲ್ಲಿ “ಯೋಗಿನಿ ಸಂಧಾನ””ಅಗ್ರಪೂಜೆ”ಯಕ್ಷಗಾನ ನಡೆಯಲಿರುವುದು.
ಉದ್ಘಾಟನೆಯನ್ನು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ರೈ ನಗ್ರಿಗುತ್ತು ಮಾಡಲಿದ್ದಾರೆ.ಸಂತೋಷ್ ಶೆಟ್ಟಿ ಆರ್‍ಎಸ್‍ಎಸ್, ರಘುಎಲ್‍ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಮಾಜಿ ಸಚಿವ ರಮಾನಾಥ ರೈ, ಬಂಟವಾಳ ಬಂಟರ ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ , ಬಂಟರ ಸಂಘದ ಕಾರ್ಯದರ್ಶಿಚಂದ್ರಹಾಶ್ ಡಿ. ಶೆಟ್ಟಿ,ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಇಂಟರ್ನ್ಯಾಶನಲ್ ಬಂಟ್ಸ್ವೆಲ್ ಫೇರ್ ಟ್ರಸ್ಟ್ ದೇವಿಚರಣ್ ಶೆಟ್ಟಿ, ಗುರುಪುರ ಬಂಟರ ಸಂಘದ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಮುಂಡಡ್ಕ ಗುತ್ತುಗಡಿಕಾರ ರತ್ನಾಕರ ಶೆಟ್ಟಿ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಂಗಾಜೆ ರಾಜೇಶ್ ಹೆಗ್ಡೆ ಮಾಧ್ಯಮಕ್ಕೆ ತಿಳಿಸಿದರು.
