ಬಂಟ್ವಾಳ:ಸಂಶೋಧಕ ಷಟಕ್ಷರಿ ಶೆಟ್ಟರ್ ಬರೆದ 'ಶೃಂಗಂ ತಮಿಳಗಂ ಮತ್ತು ಕನ್ನಡ ನಾಡುನುಡಿ' ಎಂಬ ಕೃತಿ ಇತಿಹಾಸ ಮತ್ತು ಇತಿಹಾಸ ರಚನೆಗೆ ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡಿದೆ ಎಂದು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ ಹೇಳಿದ್ದಾರೆ. 
ಇಲ್ಲಿನ ಸಿದ್ಧಕಟ್ಟೆ ಪಿಂಕಿ ಟವಸ್೯ ಸಭಾಂಗಣದಲ್ಲಿ ನಡೆದ 'ಈ ಹೊತ್ತಿಗೆ ಈ ಹೊತ್ತಗೆ' ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
23btl-Sahitfhya 
 ಕನ್ನಡ ನಾಡು ನುಡಿ ಇತಿಹಾಸವನ್ನು ಈ ಕೃತಿ ತಮಿಳಿನ ಹಿನ್ನೆಲೆಯಿಂದ ನೋಡುತ್ತದೆ. ಕನ್ನಡ ನಾಡನ್ನು ಆಳಿದ್ದು ಮೂಲತಃ ಶ್ರಮಿಕ ಸಮುದಾಯ ಎಂದರು. 
ಕಾರ್ಯಕ್ರಮದ ಸಂಚಾಲಕ ಟಿ.ಎ.ಎನ್. ಖಂಡಿಗೆ ಮಾತನಾಡಿ ಇಂದಿನ ಸಂಕೀರ್ಣ ಸ್ಥಿತಿಯಲ್ಲಿ ಕೃತಿಗೆ ಮುಖಾಮುಖಿಯಾಗುವ ಇಂತಹ ಕಾರ್ಯಕ್ರಮ ಅರ್ಥಪೂರ್ಣ ಎಂದರು. 
 ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ, ಉದ್ಯಮಿ ಮೈಕಲ್ ಡಿ'ಕೋಸ್ತ ಉಪಸ್ಥಿತರಿದ್ದರು. 
ಕಾರ್ಯಕ್ರಮ ಸಂಯೋಜಕ ಭರತ್ ಕುಮಾರ್ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *