ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ 16 ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಜೈನ್ ರವರ ಅಧ್ಯಕ್ಷತೆಯಲ್ಲಿ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. 2018-19 ನೇ ಸಾಲಿನಲ್ಲಿ ಸಂಸ್ಥೆಯು ರೂ. 41.68 ಲಕ್ಷ ಲಾಭ ಗಳಿಸಿದ್ದು, ಶೇ. 12 ರಷ್ಟು ಡಿವಿಡೆಂಡ್ ಘೋಷಿಸಲಾಯಿತು. ಸದ್ರಿ ಸಾಲಿನಲ್ಲಿ 7 ಶಾಖೆಯಲ್ಲಿ ಒಟ್ಟು 1.21 ಕೋಟಿಯಷ್ಟು ವ್ಯವಹಾರ ನಡೆಸಿದ್ದು, ರೂ. 27.75 ಲಕ್ಷ ದುಡಿಯುವ ಬಂಡವಾಳವಿದ್ದು, ರೂ. 21.19 ಲಕ್ಷದಷ್ಟು ಸಾಲದ ಹೊರಬಾಕಿಯಿರುತ್ತದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕರಾದ ಶ್ರೀ ನಾರಾಯಣ ಸಿ. ಪೆರ್ನೆ ಸ್ವಾಗತಿಸಿ, ಸಿ.ಇ.ಓ. ಶ್ರೀ ಅಜಿತ್ ಕುಮಾರ್ ಜೈನ್ ರವರು ಮಹಾಸಭೆಯ ಕಾರ್ಯಸೂಚಿಯನ್ನು ವಾಚಿಸಿದರು. ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಜೈನ್ ರವರು ವಾರ್ಷಿಕ ಲೆಕ್ಕಪತ್ರಗಳನ್ನು, ಲಾಭದ ವಿಲೇವಾರಿ ಹಾಗೂ ಬಜೆಟ್ ಮಂಡಿಸಿದರು. ಶಾಖಾಧಿಕಾರಿ ಮೋಹನ್ ಜಿ. ಮೂಲ್ಯ ವಾರ್ಷಿಕ ವರದಿಯನ್ನು ವಾಚಿಸಿ, ನಿರ್ದೇಶಕರಾದ ದಿವಾಕರ ದಾಸ್ ಪ್ರತಿಭಾ ಪುರಸ್ಕಾರವನ್ನು ನಡೆಸಿದರು. ಉಪಾಧ್ಯಕ್ಷರಾದ ಶ್ರೀ ಮಂಜುನಾಥ ರೈ, ನಿರ್ದೇಶಕರಾದ ಶ್ರೀಮತಿ ಸ್ವಪ್ನರಾಜ್, ಶ್ರೀ ರಾಜೇಶ್ ಬಿ., ಶ್ರೀ ಗಜೇಂದ್ರ ಪ್ರಭು, ಶ್ರೀ ಸುಧಾಕರ ಸಾಲ್ಯಾನ್, ಶ್ರೀ ಮೈಕಲ್ ಡಿಕೋಸ್ತಾ, ಶ್ರೀ ಹೇಮಂತ್ ಕುಮಾರ್, ಶ್ರೀ ಬಿ. ರವೀಂದ್ರ ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀಮತಿ ವಿಜಯ ಕುಮಾರಿ ಇಂದ್ರರವರು ವಂದಿಸಿದರು. ಶಾಖಾಧಿಖಾರಿ ಶ್ರೀಮತಿ ಸಪ್ನಾ ಚಂದ್ರಪ್ರಭ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ.
ವಿಧಿಷಾ ಕಾಂಪ್ಲೆಕ್ಸ್, ಕೈಕಂಬ, ಜೋಡುಮಾರ್ಗ ಅಂಚೆ, ಬಿ.ಸಿ ರೋಡು, ಬಂಟ್ವಾಳ. (ದ.ಕ)
ಇದರ ವಾರ್ಷಿಕ ಮಹಾಸಭೆ – ಲಾಭಾಂಶ ಘೋಷಣೆ
ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ದಿನಾಂಕ 21-07-2019 ನೇ ಭಾನುವಾರ ಸ್ಪರ್ಶಾ ಕಲಾಮಂದಿರದಲ್ಲಿ ಜರುಗಿದ್ದು, ಮಹಾಸಭೆಯ ಕಲಾಪದಲ್ಲಿ 630 ಜನ ಸದಸ್ಯರು ಭಾಗವಹಿಸಿದ್ದರು. ಸಂಸ್ಥೆಯು 2018-19ನೇ ಸಾಲಿಗೆ ರೂ. 41.68 ಲಕ್ಷ ನಿವ್ವಳ ಲಾಭಗಳಿಸಿದ್ದು, ಸಂಸ್ಥೆಯಲ್ಲಿ ಪಾಲು ಬಂಡವಾಳ ತೊಡಗಿಸಿದ್ದ ಸದಸ್ಯರಿಗೆ ತಮ್ಮ ಪಾಲು ಬಂಡವಾಳದ ಮೇಲೆ ಶೇಕಡಾ 12 ರಷ್ಟು ಲಾಭಂಶ (ಪಾಲುಮುನಾಫೆ) ಯನ್ನು ನೀಡುವರೇ ತೀರ್ಮಾನಿಸಿ, ಸಹಕಾರಿ ಕಾನೂನಿನಂತೆ ಉಳಿಕೆ ಲಾಭವನ್ನು ಘೋಷಿಸಲಾಯಿತು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಜೈನ್ ಇವರು ತಿಳಿಯಪಡಿಸಿದರು.
ಈಗಾಗಲೇ ಲಾಭ ಹಂಚಿಕೆ ಮಾಡಿರುವ ಸದಸ್ಯರ ಸಹಾಯ ನಿಧಿಯಿಂದ, ಸಂಸ್ಥೆಯ ಸದಸ್ಯರ ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 16 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ವಿದ್ಯಾರ್ಥಿವೇತನವನ್ನು ನೀಡಲಾಯಿತು. ಬಂಟ್ವಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಉತ್ತೀರ್ಣರಾದ 8 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಹಕಾರಿ ಕ್ಷೇತ್ರದಲ್ಲಿ ಕಾರ್ಯವೆಸಗುವರೇ ವಿವಿಧ ಉದ್ದೇಶಗಳನ್ನು ಹೊಂದಿರುವ ಈ ಸಂಸ್ಥೆಯು ಮುಂದಕ್ಕೆ ಸೆಕ್ಯುರಿಟಿ ಸರ್ವಿಸ್ ಸೇವಾ ಉದ್ದಿಮೆಯನ್ನು ಕೈಗೊಳ್ಳುವುದಕ್ಕಾಗಿ, ಉಪನಿಯಮದ ಉದ್ದೇಶದಲ್ಲಿ ಸೇರ್ಪಡೆಗೊಳಿಸಿ ಇಲಾಖಾ ಅನುಮತಿ ಪಡೆಯುವರೇ ಸಭೆಯಲ್ಲಿ ಸರ್ವಾನುಮತದ ತೀರ್ಮಾನವನ್ನು ಕೈಗೊಳ್ಳಲಾಯಿತು.
ಮುಂದಿನ ಒಂದೆರಡು ವರ್ಷದಲ್ಲಿ ಸಂಸ್ಥೆಯ ಕೇಂಧ್ರ ಕಚೇರಿಗೆ ಸ್ವಂತ ಕಟ್ಟಡವನ್ನು, ತಾಲೂಕು ಕಾರ್ಯವ್ಯಾಪ್ತಿಯಲ್ಲಿ 2 ಶಾಖೆಗಳನ್ನು ಆರಂಭಿಸುವ ಬಗ್ಗೆ, ಚರ್ಚಿಸಿ ಈ ಬಗ್ಗೆ ಕಾರ್ಯಾನ್ಮುಖರಾಗುವಂತೆ ನಿರ್ಣಯಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅಜಿತ್ ಕುಮಾರ್ ಕಾರ್ಯಸೂಚಿಯನ್ನು ಸಭೆಯಲ್ಲಿ ಮಂಡಿಸಿ, ರಾಯಿ ಶಾಖಾ ಪ್ರಬಂಧಕರಾದ ಶ್ರೀ ಮೋಹನ್ ಜಿ. ಮೂಲ್ಯ ವರದಿಯನ್ನು ಒಪ್ಪಿಸಿದರು. ಶ್ರೀಮತಿ ಶುಭಲಕ್ಷ್ಮೀ ಇವರ ಶುಭ ಹಾರೈಕೆಯ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಸಭೆಯನ್ನು ನಿರ್ದೇಶಕರಾದ ಶ್ರೀ ನಾರಾಯಣ ಸಿ. ಪೆರ್ನೆ ಸ್ವಾಗತಿಸಿದರು.
ಶ್ರೀಮತಿ ಸಪ್ನಾ ಚಂದ್ರಪ್ರಭ ಇವರ ನಿರೂಪಣೆಯಲ್ಲಿ ಜರುಗಿದ ಈ ಮಹಾಸಭೆಯಲ್ಲಿ ವಿದ್ಯಾರ್ಥಿವೇತನ ಹಾಗೂ ಸಿಬ್ಬಂದಿಗಳ ಸಾಧನಾ ಪುರಸ್ಕಾರ ಕಾರ್ಯಕ್ರಮವನ್ನು ನಿರ್ದೇಶಕರಾದ ಶ್ರೀ ದಿವಾಕರ ದಾಸ್ ನಿರ್ವಹಿಸಿದರು.
ಉಪಾಧ್ಯಕ್ಷರಾದ ಶ್ರೀ ಮಂಜುನಾಥ ರೈ, ಶ್ರೀಮತಿ ಸ್ವಪ್ನರಾಜ್, ಶ್ರೀ ಗಜೇಂದ್ರ ಪ್ರಭು, ಶ್ರೀ ರಾಜೇಶ್ ಬಿ., ಶ್ರೀ ಸುಧಾಕರ ಸಾಲ್ಯಾನ್, ಶ್ರೀ ಮೈಕಲ್ ಡಿಕೋಸ್ತಾ, ಶ್ರೀ ಬಿ. ರವೀಂದ್ರ, ಶ್ರೀ ಹೇಮಂತ್ ಕುಮಾರ್ ಜೈನ್, ಇವರುಗಳು ಉಪಸ್ಥಿತರಿದ್ದರು.
ಕೊನೆಯಲ್ಲಿ ನಿರ್ದೇಶಕರಾದ ಶ್ರೀಮತಿ ವಿಜಯಕುಮಾರಿ ಇಂದ್ರ ವಂದನಾರ್ಪಣೆ ಮಾಡಿದರೆ, ಸಂಸ್ಥೆಯ ಸಿಬ್ಬಂದಿಯವರು ರಾಷ್ಟ್ರಾಭಿಮಾನ ಗೀತೆಯನ್ನು ಹಾಡುವುದರ ಮೂಲಕ ಸಭೆಯನ್ನು ಮುಕ್ತಾಯಗೊಳಿಸಲಾಯ್ತು.

