ಮಂಗಳೂರು: ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಕರ್ನಾಟಕ ಹಾಗೂ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಭಾರತ ಶಿಕ್ಷಣ ಯಾತ್ರೆ ಯ ರಥ ಮಂಗಳವಾರ ಬೆಳಿಗ್ಗೆ ಕೊಲ್ಹಾಪುರದಿಂದ ಮುಂಬೈಯತ್ತ ಪ್ರಯಾಣ ಬೆಳೆಸಿದೆ.
ಬುಧವಾರ ಬೆಳಿಗ್ಗೆ 10 ಗಂಟೆಗೆ ಮುಂಬೈ ಮಹಾನಗರದ ಸಾಂತಕ್ರೂಜ್ ಬಿಲ್ಲವ ಭವನದಲ್ಲಿ ರಥ ಯಾತ್ರೆ ಯನ್ನು ಮುಂಬೈಯ ಎಲ್ಲಾ ಶಿಕ್ಷಣಾಭಿಮಾನಿಗಳು, ಗಣ್ಯರು ಸ್ವಾಗತಿಸಲಿದ್ದಾರೆ.



