ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮ ಮಂಜಲ್ ಪಲ್ಕೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಆಕ್ರಮ ಕಸಾಯಿಖಾನೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ್ದು,ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.ಮಂಜಲ್ ಪಲ್ಕೆ ನಿವಾಸಿಗಳಾದ ಅಬ್ದುಲ್ ರಜಾಕ್,ರಾಜಿಕ್,ರಿಯಾಜ್ ಬಂಧಿತ ಆರೋಪಿಗಳಾಗಿದ್ದಾರೆ. 
ಶನಿವಾರ ಸಂಜೆ ಪುಂಜಾಲಕಟ್ಟೆ ಠಾಣೆಯ ಎಸ್. ಐ . ಸೌಮ್ಯ ಜೆ .ಮತ್ತವರ ಸಿಬಂದಿಗಳು ಗಸ್ತಿನಲ್ಲಿದ್ದಾಗ ಬಂದ ಮಾಹಿತಿಯನ್ನಾಧರಿಸಿ ಆರೋಪಿ ಅಬ್ದುಲ್ ರಜಾಕ್ ಎಂಬಾತ ತನ್ನ ಮನೆಯ ಹಿಂಬದಿಗೆ ದಾಳಿ ನಡೆಸಿದಾಗ ಆರೋಪಿಗಳು ಸೇರಿಕೊಂಡು ಎಲ್ಲಿಂದಲೋ ಕದ್ದು ತಂದ ಗೋವನ್ನು ವಧೆ ಮಾಡಿ ಅದರ ಮಾಂಸವನ್ನು ಆಟೋ ರಿಕ್ಷಾದಲ್ಲಿ ಆಕ್ರಮವಾಗಿ ಸಾಗಿಸಲು ಯತ್ನಿಸುವುದು ಪತ್ತೆಯಾಗಿದೆ.ತಕ್ಷಣ ಆರೋಪಿಗಳನ್ನು ಹಾಗೂ ಸ್ಥಳದಲ್ಲಿದ್ದ ಸುಮಾರು 60 ಕೆ.ಜಿ ಗೋಮಾಂಸ ಆಟೊರಿಕ್ಷಾ ಹಾಗೂ ಕೆಲ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಲಾದ ಸೊತ್ತುಗಳ ಮೌಲ್ಯ 1.22.000 ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ,ಮುಂದಿನ ತನಿಖೆ ನಡೆಯುತ್ತಿದೆ
