ಬಂಟ್ವಾಳ ಡಿವೈಎಸ್ಪಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿರುವ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಯ ಉದ್ದೇಶದಿಂದ ಮತ್ತು ತೀರಾಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವ ಉದ್ದೇಶದಿಂದ ಬಂಟ್ವಾಳಕ್ಕೆ ಎಎಸ್ಪಿ ಹುದ್ದೆಯನ್ನು ಮಂಜೂರುಮಾಡಿದೆ. ಬಂಟ್ವಾಳದ ನೂತನ ಎಎಸ್ಪಿಯಾಗಿ ರಾಹುಲ್ ಕುಮಾರ್ ಎಂಬವರು ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

1
ಬಂಟ್ವಾಳ ಎಎಸ್ಪಿ ಕಛೇರಿ ವ್ಯಾಪ್ತಿಗೆ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ವಿಟ್ಲ, ಬೆಳ್ತಂಗಡಿ, ವೇಣೂರು ಹಾಗೂ ಪೂಂಜಾಲಕಟ್ಟೆ ಠಾಣೆಗಳು ಕಾರ್ಯನಿರ್ವಹಿಸುತ್ತವೆ. ಬಂಟ್ವಾಳ ಪರಿಸರದಲ್ಲಿನ ಕೋಮುಸೂಕ್ಷ್ಮತೆ ಹಾಗೂ ಬೆಳ್ತಂಗಡಿ-ವೇಣೂರು ಪರಿಸರದಲ್ಲಿನ ನಕ್ಸಲ್ ಸಮಸ್ಯೆಗಳ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿಗೆ ಕಮೀಷನರ್ ಕಛೇರಿ ಬಂದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಬಂಟ್ವಾಳ ಅಥವಾ ಪುತ್ತೂರಿಗೆ ವಗರ್ಾವಣೆಗೊಳ್ಳುವ ಬಗ್ಗೆ ಅಭಿಪ್ರಾಯ ಕೇಳಿಬಂದಿತ್ತು. ಅದರೆ ಇದೀಗ ಬಂಟ್ವಾಳಕ್ಕೆ ನೂತನ ಎಎಸ್ಪಿ ನೇಮಕದೊಂದಿಗೆ ಇದು ಅರ್ಧದಷ್ಟು ಸತ್ಯವಾಗಿದೆ. ಈ ನಡುವೆ ಕಳೆದ ಫೆ.18 ರಿಂದ ಬಂಟ್ವಾಳದಲ್ಲಿ ಡಿವೈಎಸ್ಪಿಯಾಗಿ ಅಧಿಕಾರದಲ್ಲಿದ್ದ ರಶ್ಮಿ. ಪರಡ್ಡಿಯವರನ್ನು ಬೆಂಗಳೂರಿನ ಇಲಾಖೆಯ ಕೇಂದ್ರ ಕಚೇರಿಗೆ ಮುಂಬಡ್ತಿಯಾಗಿ ವಗರ್ಾಯಿಸಲಾಗಿದೆ .
ಬಂಟ್ವಾಳದ ನೂತನ ಎ.ಎಸ್.ಪಿ ಮುಂದೆ ಹಲವಾರು ಸವಾಲುಗಳು?
ಕೋಮು ಸೂಕ್ಷ್ಮವಾದ ಬಂಟ್ವಾಳ ಪರಿಸರದಲ್ಲಿ ಶಾಂತಿ ಭಂಗಮಾಡುವ ಪುಂಡು ಪೋಕರಿಗಳಿಗೆ ಕಮ್ಮಿಯಿಲ್ಲ, ಕ್ಷುಲ್ಲಕ ಕಾರಣಗಳಿಗೆ ನಡೆಯುವ ವಿವಾದಗಳು, ಗ್ಯಾಂಗ್ ವಾರ್ಗಳು, ಮರ್ಡರ್ ಇಡೀ ಬಂಟ್ವಾಳದ ಜನತೆಯನ್ನು ತಲ್ಲಣಗೊಳಿಸಿದ ಹಲವಾರು ಘಟನೆಗಳಿವೆ. ರಾಜಕೀಯವಾಗಿಯೂ ಬಂಟ್ವಾಳ ಸದಾ ಒಂದಿಲ್ಲೊಂದು ಸುದ್ದಿ ಮಾಡುವುದು ಕೂಡಾ ಇಲ್ಲಿ ಸಾಮನ್ಯ. ಇನ್ನು ದಂದೆಗಳಿಗೇನೂ ಕಮ್ಮಿಯಿಲ್ಲ. ಈ ಎಲ್ಲಾ ಚಟುವಟಿಯನ್ನು ಕೂಲಂಕುಸವಾಗಿ ಪರಿಶೀಲಿಸಿ ನಿಬಾಯಿಸುವುದು ಇವರಿಗೆ ಸವಾಲಾಗುವುದೇ? ಇಲ್ಲಿ ನಿರಂತರವಾಗಿ ನೇತ್ರಾವತಿ ನದಿಯಿಂದ ಕೇರಳಕ್ಕೆ ,ಬೆಂಗಳೂರಿಗೆ ರವಾನಿಸುವ ಅಕ್ರಮ ಮರಳುಗಾರಿಕೆ, ಅಕ್ರಮವಾಗಿ ನಡೆಯುವ ಕೆಂಪು ಕಲ್ಲಿನ ಕೋರೆ, ಇಲ್ಲಿನ ಇಲಾಖೆಗೆ ಗೊತ್ತಿದ್ದು ನಿರಂತರವಾಗಿ ಬಿ.ಸಿ.ರೋಡಿನ ಕೆಲವೊಂದು ಲಾಡ್ಜ್ಗಳಲ್ಲಿ ನಡೆಯುವ ಜುಗಾರಿ ಮತ್ತು ವೇಶ್ಯಾವಾಟಿಕೆ, ಇಲಾಖೆಗೆ ಮಾಮೂಲಿ ನೀಡಿ ಜನಪ್ರತಿನಿಧಿಗಳ ಸಹಾಯ ಹಸ್ತದೊಂದಿಗೆ ನಡೆಯುವ ಆಕ್ರಮ ಕೋಳಿ ಅಂಕ, ಹಟ್ಟಿಯಂದ ಮನೆ ಮಂದಿಗೆ ತಲವಾರು ತೋರಿಸಿ ದನಕಳ್ಳತನ, ಅಕ್ರಮವಾಗಿ ನಡೆಯುವ ಗೋವಧೆ, ಅಂತಹ ಸಂದರ್ಭಗಳಲ್ಲಿ ನೈತಿಕ ಪೋಲಿಸ್ ಗಿರಿ ನಡೆಯುವಂತಹ ಪ್ರಸಂಗಗಳು ಇವೆಲ್ಲವನ್ನು ಕಡಿವಾಣ ಹಾಕಲು ಇವರು ಮುಂದಾಗಬಹುದೇ?
ಇತ್ತೀಚಗೆ ಕಲ್ಲಡ್ಕದಲ್ಲಿ ನೆಡೆದ ಕಾರ್ಯಕ್ರಮವೊಂದರಲ್ಲಿ ಪೋಲಿಸರ ಮೇಲೆ ಹಲ್ಲೆ, ವಿನಾ ಕಾರಣ ನಿರಪರಾಧಿಗಳ ವಗರ್ಾವಣೆ, ಕಲ್ಲಡ್ಕದಲ್ಲಿ ನಡೆಯುವ ಕೋಮು ಗಲಭೆಗಳು, ಇತ್ತೀಚೆಗೆ ಟೋಲ್ ಸಂಗ್ರಹಕಾರರ ಮೇಲೆ ಹಲ್ಲೆ ಮತ್ತು ದರೋಡೆ ಪ್ರಕರಣ , ಟೋಲ್ ಸಂಗ್ರಹಕಾರರು ವಾಹನ ಚಾಲಕರ ಮೇಲೆ ನಡೆಸುವ ದೌರ್ಜನ್ಯ ಇವೆಲ್ಲದಕ್ಕೆ ಅಂತ್ಯ ಕಾಣಬಹುದೇ?
ಮರು ಜೀವ ತುಂಬುವರೇ?
ಬಂಟ್ವಾಳದಲ್ಲಿ ಸುಮಾರು ವರ್ಷಗಳ ಹಿಂದೆ ನಡೆದ ಶಿವಪ್ಪ ಕೊಲೆ ಪ್ರಕರಣ, ಭಾರತಿ ಕೊಲೆ ಪ್ರಕರಣ, ಇತ್ತೀಚೆಗೆ ಬೆಂಜನಪದವು ರಿಕ್ಷಾ ಪಾಕರ್ಿಂಗ್ನಲ್ಲಿ ನಡೆದ ರಾಜೇಶ್ ಪುಜಾರಿ ಕೊಲೆ ಪ್ರಕರಣ, ಧರ್ಮಸ್ಥಳದಲ್ಲಿ ನೆಡದ ಸೌಜನ್ಯ ಕೊಲೆ ಪ್ರಕರಣ, ಅಸಹಜ ಸಾವಿನ ಬಗ್ಗೆ, ಇತ್ತಿಚೆಗೆ ಎಲ್ಲಾ ಕಡೆಗಳಲ್ಲಿ ನಡೆಯುವ ಹುಡಿಗಿಯರ ಚುಡಾವಣೆ, ಬಾಲಕಿಯರ ಅತ್ಯಾಚಾರ, ಮೋಬೈಲು , ಪೇಸ್ ಬುಕ್ ವಿವಾದ, ಬೆಳ್ತಂಗಡಿ ಮತ್ತು ವೇಣೂರು ಪರಿಸರದಲ್ಲಿನ ನಕ್ಸಲ್ ಸಮಸ್ಯೆ, ಪುಂಜಾಲಕಟ್ಟೆಯಲ್ಲಿ ನಡೆಯುವ ಕೆಲ ಅಕ್ರಮ ದಂದೆಗಳು, ವಿಟ್ಲ ಪರಿಸರದಲ್ಲಿ ಯಾರ ಭಯವೂ ಇಲ್ಲದೆ ನಡೆಯುವ ಕಳ್ಳತನ ಪ್ರಕರಣಗಳು, ಕೇರಳದಿಂದ ಕನರ್ಾಟಕ್ಕೆ ಬರುವ ಕಳ್ಳರು, ಚೆಕ್ ಪೋಸ್ಟ್ನಲ್ಲಿ ಪೋಲಿಸರ ನಿರ್ಲಕ್ಷ್ಯ, ಅಪರಾಧಿಗಳನ್ನು ರಕ್ಷಿಸಿ ವಿಟ್ಲ ಪರಿಸರದಲ್ಲಿ ತಪ್ಪಿಸಿ ಕೂರಲು ಸಹಾಯ ನೀಡುವಂತಹವುದು, ಹೀಗೆ ಹಲವಾರು ಪ್ರಕರಣಗಳಿಗೆ ಜೀವ ತುಂಬಿ ಹೊಸ ಬಾಷ್ಯ ಬರೆಯುವರೇ ರಾಹುಲ್ ಕುಮಾರ್.
ಟ್ರಾಫಿಕ್ ಸಮಸ್ಯೆಯಿಂದ ಕಾಡುತ್ತಿರುವ ಬಿ.ಸಿರೋಡ್ಗೆ ಇಂಜೆಕ್ಷನ್ ನೀಡಿ ಸರಿಪಡಿಸುವ ವ್ಯವಸ್ಥೆ ಮಾಡುತ್ತಾರಾ? ಇಲ್ಲಿನ ಅಸಂಬದ್ದ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಯನ್ನು ಹೊಗಲಾಡಿಸಲು ಪ್ರಯತ್ನ ಮಾಡತ್ತಾರೋ? ರಸ್ತೆಯ ಬದಿಯಲ್ಲಿ ರುವ ಅಕ್ರಮ ಗೂಡಂಗಡಿಗಳ ತೆರವು, ರಿಕ್ಷಾ ಪಾಕರ್ಿಂಗ್, ಇನ್ನಿತರ ಎಲ್ಲಾ ವಾಹನಗಳ ಪಾಕರ್ಿಂಗ್ , ಸೂಕ್ತ ಬಸ್ ನಿಲ್ದಾಣದ ಇಲ್ಲದೇ ಇಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕೀತೇ?
ಬದಲಾದೀತೇ ಬಂಟ್ವಾಳ: ಈ ಮೊದಲು ಪುತ್ತೂರು ಎಸ್ಪಿ ವಿಭಾಗವಾಗಿದ್ದರೂ ಕೂಡಾ ಬಂಟ್ವಾಳಕ್ಕೆ ಅದು ಹೆಚ್ಚು ಪ್ರಾಮುಖ್ಯವಾಗಿತ್ತು. ಇಲ್ಲಿ ಎನಾದರೊಂದು ಘಟನೆಗಳು ನಿರಂತರವಾಘಿ ನಡೆಯುತ್ತಲೇ ಇತ್ತು. ಹಿಂದೆ ಪತ್ತೂರು ಎಎಸ್ಪಿ ಯಾಗಿ ದಯಾನಂದ ಅವರು ಕಾರ್ಯ ನಿರ್ವಹಿಸಿದಾಗ ಸಾಕಷ್ಟು ಹೆಸರು ಗಳಿಸಿದ್ದರು, ಅವರಿಗೆ ಬಂಟ್ವಾಳ ವ್ರತ್ತ ನಿರೀಕ್ಷಕ ನಂಜುಡೇ ಗೌಡ ಅವರು ಸಹಕಾರ ಕೂಡಾ ನೀಡಿದ್ದರು. ಸಾಕಷ್ಟು ವಿವಾದ ಉಂಟು ಮಾಡಿದ್ದ ಹುಡಿಗಿಯರ ಅಪಹರಣ ಪ್ರಕರಣಕ್ಕೆ ಸಂಬಂದಿಸಿದಂತೆ ಸೈನಡ್ ಕಿಲ್ಲರ್ ಮೋಹನ್ ಬಂಧನ ಮತ್ತು ಪೆಟ್ರೋಲ್ ದಂಧೆಗೆ ಇತಿ ಶ್ರೀ ಹಾಡಿರುವುದು ಇಂದು ಕೂಡಾ ಜನ ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಡಾ|ಹರ್ಷ, ಚಂದ್ರಗುಪ್ತ, ಅಮಿತ್ ಸಿಂಗ್, ರೋಹಿಣಿ ಕಟೋಚ್ಚಾ, ಡಾ|ಅನುಚೇತ್ ಇವರೆಲ್ಲರೂ ಇಲ್ಲಿನ ಬೆದರಿಕೆಗೆ ಜಗ್ಗದೆ ಎದೆಗಾರಿಕೆಯಲ್ಲಿ ಕೆಲಸ ಮಾಡಿ ಜನರಿಗೆ ನ್ಯಾಯ ಒದಗಿಸಿಕೊಟ್ಟವರು.
ಬ್ರೋಕರ್ ಗಿರಿ ನಿಂತಿತೇ?
ಸಣ್ಣ ಪುಟ್ಟ ಪ್ರಕರಣಗಳಿಂದ ಹಿಡಿದು ಅನ್ಯಾಯ ಅನಾಚರಗಳ ಪ್ರಕರಣಗಳ ಆರೋಪಿಗಳ ಪರವಾಗಿ ಇಲ್ಲಿನ ಠಾಣೆಗಳಿಗೆ ಬರುವ ಬ್ರೋಕರ್ಗಳಿಗೇನೂ ಕಡಿಮೇಇಲ್ಲ. ಇನ್ನು ಮುಂದೆ ಇವೆಲ್ಲದಕ್ಕೆ ಕಡಿವಾಣ ಬೀಳಬಹುದೇ ಕಾದುನೋಡೋಣ.

By suddi9

Leave a Reply

Your email address will not be published. Required fields are marked *