ಬಂಟ್ವಾಳ: ಇಲ್ಲಿನ ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವ ಪ್ರಯುಕ್ತ ಇದೇ 12ರಂದು ಬೆಳಿಗ್ಗೆ ಗಂಟೆ 9.30ರಿಂದ ಸಂಜೆ ಗಂಟೆ 4.30ರ ತನಕ ‘ಹಲಸು ಮೇಳ’ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ವಿವಿಧ ಬಗೆಯ ಹಲಸಿನ ಕರಿದ ತಿಂಡಿ-ತಿನಿಸು, ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಬಗ್ಗೆ ವಿಶೇಷ ಮಾಹಿತಿ ಕಾಯರ್ಾಗಾರ, ಹಲಸಿನ ಕಸಿ ಕಟ್ಟುವುದರ ತರಬೇತಿ ನಡೆಯಲಿದೆ. ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಹಲಸಿನ ಕಸಿ ಪರಿಣತ ಜಾಕ್ ಅನಿಲ್, ಅಡಿಕೆ ಪತ್ರಿಕೆ ಸಹ ಸಂಪಾದಕ ನಾ ಕಾರಂತ ಪೆರಾಜೆ, ಹಿರಿಯ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಮತ್ತಿತರ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವರು ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
