ಬಂಟ್ವಾಳ : ಅಧಿವಕ್ತಾ ಪರಿಷತ್ , ವಕೀಲರ ಸಂಘ, ಕಾನೂನು ಸೇವೆಗಳ ಸಮಿತಿ , ಪ್ರಾದೇಶಿಕ ಅರಣ್ಯ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ನಡೆಯಿತು.  ಹಿರಿಯ ಸಿವಿಲ್ ನ್ಯಾಯಾಧೀ ಶರಾದ ಮಹಮ್ಮದ್ ಇಮ್ತಿಯಾಝ್ ಅಹ್ಮದ್ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸ ಕ್ಕೆ ಚಾಲನೆ ನೀಡಿದರು.

KAR_2214

KAR_2231 ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ರಮ್ಯಾ ಎಚ್.ಆರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶರಾದ ಶಿಲ್ಪಾ ಜಿ.ತಿಮ್ಮಾಪುರ್, ಅರಣ್ಯಾಧಿಕಾರಿ ಸುರೇಶ್.ಬಿ , ಅಧಿವಕ್ತಾ ಪರಿಷತ್ ಸಂಚಾಲಕ ರಾಜಾರಾಮ್ ನಾಯಕ್, ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಉಪಾಧ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ, ನ್ಯಾಯವಾದಿಗಳಾದ ವೀರೇಂದ್ರ ಎಮ್.ಸಿದ್ದಕಟ್ಟೆ, ಜಯರಾಮ ರೈ, ಅಜಿತ್ ಕುಮಾರ್ ರಾವ್, ಚಂದ್ರಶೇಖರ ಬೈರಿಕಟ್ಟೆ, ನರೇಂದ್ರನಾಥ ಭಂಡಾರಿ, ಕೆ.ವೆಂಕಟ್ರಮಣ ಭಟ್,ಉಮೇಶ್ ವೈ  ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *