ಬಂಟ್ವಾಳ:ಜಿಲ್ಲಾ  ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತರು, ನಿವೃತ್ತ  ಶಿಕ್ಷಕ ಸಂಕಪ್ಪ ಶೆಟ್ಟಿ  8980808080 ಸಂಖ್ಯೆ ಗೆ ಮಿಸ್ಡ್  ಕಾಲ್ ನೀಡುವ ಮೂಲಕ  ಶನಿವಾರ ಸಂಜೆ ಬಂಟ್ವಾಳ ಕ್ಷೇತ್ರ ಬಿಜೆಪಿಯ  ಸದಸ್ಯತ್ವಅಭಿಯಾನಕ್ಕೆ ಚಾಲನೆ ನೀಡಿದರು.

IMG-20190706-WA0099

ಬಿ.ಸಿ.ರೋಡಿನ ಬಂಟ್ವಾಳ ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ಜನಸಂಘ ಕಾಲದ ಹಿರಿಯರಾದ ಕೃಷ್ಣ  ಶೆಟ್ಟಿ ದಂಡೆ ಅವರನ್ನು  ಶಾಸಕ ರಾಜೇಶ್  ನಾಯ್ಕ್  ಉಳಿಪ್ಪಾಡಿಗೌರವಿಸಿದರು. ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ  ನಾವೂರ ಈ ಸಂಧರ್ಭದಲ್ಲಿ  ಪಕ್ಷಕ್ಕೆ ಸೇರ್ಪಡೆಗೊಂಡರು.

IMG-20190706-WA0111 ಕ್ಷೇತ್ರ  ಬಿಜೆಪಿ ಅಧ್ಯಕ್ಷ  ದೇವದಾಸ್  ಶೆಟ್ಟಿ , ರಾಜ್ಯ ಸಹ ವಕ್ತಾರೆಸುಲೋಚನ.ಜಿ.ಕೆ.ಭಟ್, ಜಿಲ್ಲಾ  ವಕ್ತಾರ  ಹರಿಕೃಷ್ಣ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಮೋನಪ್ಪ ದೇವಸ್ಯ,  ಸದಸ್ಯತಾ ಅಭಿಯಾನದ ಕ್ಷೇತ್ರ  ಸಂಚಾಲಕ  ದೇವಪ್ಪಪೂಜಾರಿ, ಸಹ ಸಂಚಾಲಕ  ಅಭಿಷೇಕ್ ರೈ, ಯುವ ಮೋರ್ಚ ಜಿಲ್ಲಾ  ಪ್ರಧಾನ ಕಾರ್ಯದರ್ಶಿ  ಸಂದೇಶ  ಶೆಟ್ಟಿ , ಜಿಲ್ಲಾ  ಎಸ್ಸ್ ಸಿ ಮೋರ್ಚ ಅಧ್ಯಕ್ಷ  ದಿನೇಶ್ ಅಮ್ಟೂರ್, ಜಿ.ಪಂ ಸದಸ್ಯೆ ಕಮಲಾಕ್ಷಿಪೂಜಾರಿ, ತಾಲೂಕು ಪಂಚಾಯತ್ , ಪುರಸಭಾ ಸದಸ್ಯರು  ಹಾಗೂ ಶಕ್ತಿಕೇಂದ್ರ ಪ್ರಮುಖರು ಉಪಸ್ಥಿತರಿದ್ದರು.

IMG-20190706-WA0101

By suddi9

Leave a Reply

Your email address will not be published. Required fields are marked *