ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಮತ್ತು ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವು ಇತ್ತೀಚೆಗೆ ಶಕ್ತಿನಗರ ತುಳುವೆರೆ ಕೂಟದ ಸಭಾಂಗಣದಲ್ಲಿ ನೆರವೇರಿತು.

IMG-20190705-WA0007ಯೋಜನೆಯ ಕದ್ರಿ ವಲಯ ಅಧ್ಯಕ್ಷರಾದ ಶ್ರೀಮತಿ ಸುಚಿತ್ರಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೇಂದ್ರದ ಪ್ರಯೋಜನ ಪಡೆದುಕೊಂಡು ಮಹಿಳೆಯರು ಜ್ಞಾನ ವ್ರದ್ಧಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮವನ್ನು ತುಳುವೆರೆ ಕೂಟದ ಮಾಜಿ ಅಧ್ಯಕ್ಷರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಎಸ್. ಸುಧಾಕರ ಜೋಗಿ ಉದ್ಘಾಟಿಸಿ ಮಹಿಳೆಯರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ವೇದಿಕೆಯಲ್ಲಿದ್ದ ನಿರ್ವತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯಲಕ್ಷ್ಮಿರವರು ಪೌಷ್ಟಿಕ ಆಹಾರ ಹಾಗೂ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತಾಲ್ಲೂಕು ಯೋಜನಾಧಿಕಾರಿ ಶ್ರೀ ಉಮರಬ್ಬರವರು ಕೇಂದ್ರದ ಅಶಯ, ಉದ್ದೇಶ, ಹಿನ್ನೆಲೆ ಯೊಂದಿಗೆ ಮಹಿಳೆಯರು ಪಡೆದುಕೊಳ್ಳಬಹುದಾದ ಪ್ರಯೋಜನದ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಪರಿಸರವನ್ನು ಉಳಿಸಿಕೊಳ್ಳಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಮಳೆ ಕೊಯ್ಲು ಬಗ್ಗೆ ಆದ್ಯತೆ ನೀಡಲು ಕರೆಕೊಟ್ಟರು. ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಲತಾ ವೇದಿಕೆಯಲ್ಲಿದ್ದರು. ಕದ್ರಿ ವಲಯ ಮೇಲ್ವಿಚಾರಕಿ ಶ್ರೀಮತಿ ಲತಾ ಸ್ವಾಗತಿಸಿ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಚಂದ್ರಮೋಹಿನಿ ಪ್ರಸ್ತಾವನೆ ಗೈದರು. ಒಕ್ಕೂಟದ ಮಾಜಿ ಅಧ್ಯಕ್ಷೆ ಶ್ರೀಮತಿ ಲತಾ ವಂದಿಸಿದರು. ಶಕ್ತಿನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ರೀಮತಿ ವನಿತಾ ಸುಂದರ ರವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *