ಬಂಟ್ವಾಳವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣಾ ವೇದಿಕೆ ಮಂಗಳೂರು ವತಿಯಿಂದ ಬಂಟ್ವಾಳದಲ್ಲಿ ಗೋವಂಶದ ಮೇಲಿನ ಕ್ರೌರ್ಯ, ಗೋಕಳ್ಳತನ, ಅಕ್ರಮ ಗೋಸಾಗಾಟ ವಿರುದ್ಧ ಪ್ರತಿಭಟನೆ ಬುಧವಾರ ನಡೆಯಿತು.

IMG-20190703-WA0128
ಈ ಸಂದರ್ಭ ದುರ್ಗಾವಾಹಿನಿ ಸಂಚಾಲಕಿ ವಿದ್ಯಾಮಲ್ಯ. ಅವರು ಮಾತನಾಡಿ , ನಾವು ಶಾಂತಿಪ್ರಿಯರಲ್ಲದೆ ಅಧರ್ಮದ ಮಾರ್ಗ ತುಳಿಯುವುದಿಲ್ಲ,ಅಕ್ರಮ ಗೋ ಸಾಗಾಟ ವಿಚಾರದಲ್ಲಿ ನೀವು ಯೋಚನೆ ಮಾಡಿದ್ದರೆ ಅದನ್ನು ತಕ್ಷಣದಿಂದಲೇ ಬಿಟ್ಟುಬಿಡಿ ಎಂದು ಎಚ್ಚರಿಸಿದರು.                                      ಹಿಂದು ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಗೋವಂಶವನ್ನು ನಿರ್ಮೂಲನೆ ಮಾಡಲು ಪ್ರಚೋದಿಸುವ ಅಕ್ರಮ ಗೋಸಾಗಾಟವನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು. ಸಂಪೂರ್ಣ ಗೋರಕ್ಷಣೆಗೆ ಕ್ರಮ ಕೈಗೊಳ್ಳದೇ ಇದ್ದರೆ, ಸಂವಿಧಾನದ ಚೌಕಟ್ಟಿನಲ್ಲಿ ನೇರ ಕಾರ್ಯಾಚರಣೆ ಮಾಡುವ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಶ್ರೀಕ್ಷೇತ್ರ ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ ಅವರು ಭಾಗವಹಿಸಿ  ಬೆಂಬಲ ವ್ಯಕ್ತಪಡಿಸಿದರು.ಇದೇ ವೇಳೆ ಒಡಿಯೂರು ಶ್ರೀಗಳು ಗೋಪೂಜೆಯನ್ನು  ನೆರವೇರಿಸಿದರು
ಸುಮಾರು ೨ ಗಂಟೆಗಳ ಕಾಲ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ, ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಅಧ್ಯಕ್ಷ ನರಸಿಂಹ ಶೆಟ್ಟಿ, ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕ ಅಕೇಶ್, ಪ್ರಮುಖರಾದ ಗುರುರಾಜ ಬಂಟ್ವಾಳ, ಬಿಜೆಪಿ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ವಜ್ರನಾಥ ಕಲ್ಲಡ್ಕ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಬಂಟ್ವಾಳ ತಹಶೀಲ್ದಾರ್ ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರಾಣಿ ಕ್ರೌರ್ಯ ತಡೆ ಮಂಡಳಿ ನಿಯಮಾವಳಿ ಜಾರಿ ಬಂದು ೧೮ ವರ್ಷಗಳಾದರೂ ಕ್ರಮ ಕೈಗೊಂಡಿಲ್ಲ, ಹಿಂಸಾತ್ಮಕ ಗೋಸಾಗಾಟವನ್ನು ತಡೆಹಿಡಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ, ಗೋಕಳ್ಳನನ್ನು ಸಾರ್ವಜನಿಕರು ಹಿಡಿಯಲು ಹೆದರುವಂತಾಗಿದೆ, ಜಿಲ್ಲೆಯ ನಾನಾ ಕಡೆ ಅಕ್ರಮ ಕಸಾಯಿಖಾನೆಗಳಿದ್ದರೂ ಅವುಗಳ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಪ್ರಶ್ನಿಸಿದರು. .

 

By suddi9

Leave a Reply

Your email address will not be published. Required fields are marked *