ಸುದ್ದಿ9ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಮಳೆಗೆ ಕುಸಿತಕ್ಕೀಡಾದ ಗೋಪಾಲ ಪೂಜಾರಿ-ಯಶೋಧ ದಂಪತಿ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲು ಶನಿವಾರ ಸಂಜೆ ಭೇಟಿ ನೀಡಿ ಆಹಾರ ಧಾನ್ಯ ಖರೀದಿಗೆ ರೂ 10ಸಾವಿರ ಸಹಾಯಧನ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಬಬಿತಾ ಕೋಟ್ಯಾನ್, ಸದಸ್ಯ ಜಯರಾಮ ಸಾಲ್ಯಾನ್, ತಾ.ಪಂ.ಸದಸ್ಯ ದಿನೇಶ ಅಮ್ಟೂರು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಕಾರ್ಯದಶರ್ಿ ರಾಮದಾಸ ಬಂಟ್ವಾಳ್ ಮತ್ತಿತರರು ಇದ್ದರು.


