ರಾಯಲ್ಪಾಡು : ಕುಡಿಯುವ ನೀರಿನ ಅಭಾವ ತತ್ತರಿಸುತ್ತಿರುವ ಈ ಭಾಗದ ಜನರಿಗೆ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಮಂಜುನಾಥ್ ತಿಳಿಸಿದರು. ರಾಯಲ್ಪಾಡು ಸಮೀಪದ ಲಕ್ಷ್ಮೀಪುರ ಕ್ರಾಸ್‍ನ ಕೆನರಾ ಬ್ಯಾಂಕ್ ಸಮೀಪದ ನೆಲವಂಕಿ ಹೋಬಳಿಯ ಸಾರ್ವಜನಿಕರ ಕುಂದುಕೊರತೆ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಕುಡಿಯುವ ನೀರಿಗೆ ಸಂಬಂದಿಸಿದಂತೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ನೀರಿನ ಸಮಸ್ಯೆ ಇರುವಂತಹ ಗ್ರಾಮಗಳಲ್ಲಿ ಬಗ್ಗೆ ಮಾಹಿತಿ ಪಡೆದು ಟ್ಯಾಂಕರ್ ಮೂಲಕ ನೀರನ್ನು ಹೊಡಿಸಿ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ತಿಳಿಸಿ, ಜಿಲ್ಲಾ ಆಡಳಿತವು ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಯ ಎದುರಾಗಂತೆ ಎಚ್ಚರವಹಿಸಿದ್ದು, ನೀರಿನ ಸಮಸ್ಯೆ ಬಗಹರಿಸಲು ಹಣ ಕೊರತೆ ಇಲ್ಲ ಆದರೆ ನೀರಿನ ಸಮಸ್ಯೆ ಎದರಾಗಂತೆ ಎಚ್ಚರವಹಿಸುವಂತೆ ತಿಳಿಸಿದರು.

ಹಾಗು ಸಾರ್ವಜನಿಕರ ಕುಂದುಕೊರತೆಗಳನ್ನ ಸ್ಥಳೀಯ ಅಧಿಕಾರಿಗಳು ತಮ್ಮ ಇತಿಮಿತಿಯಲ್ಲಿ ಆಗುವಂತಹ ಕೆಲಸ ಕಾರ್ಯಗಳನ್ನು ಅತಿ ಶೀಘ್ರವಾಗಿ ಪರಿಹರಿಸುವಂತೆ ಆದೇಶಿಸಿದರು.ಹಾಗು ಕೃಷಿ ಇಲಾಖೆಗೆ ಸಂಬಂದಿಸಿದಂತೆ ಪ್ರದಾನಮಂತ್ರಿ ಕಿಸಾನ್ ಯೋಜನೆಗೆ ಸಂಬಂದಿಸಿದಂತೆ ಹೋಬಳಿಯ ರೈತರಿಂದ ಸ್ವೀಕರಿಸಲಾದ ಅರ್ಜಿಗಳು ಕೇವಲ 37%ರಷ್ಟು ಅರ್ಜಿ ಸ್ವೀಕರಿಸಲಾಗಿದೆ ಇದರ ಪ್ರಗತಿ ಸಾಲದು ಇನ್ನು ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ರೈತರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ ಯೋಜನೆಯನ್ನು ಸಮಾಜ ಕಟ್ಟಡೆಯ ವ್ಯಕ್ತಿಯ ವರೆಗೂ ಸದ್ಭಳಕೆ ಮಾಡಿಕೊಡುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಕೃಷಿ,ತೋಟಗಾರಿಕೆ,ಬೆಸ್ಕಾಂ,ಕಂದಾಯ,ಶಶಿಅಭಿವೃದ್ಧಿಯೋಜನಾಧಿಕಾರಿಗಳು ಹಾಗು ಇತರ ಇಲಾಖಾವಾರು ಕಾರ್ಯರೂಪಕ್ಕೆ ಬಂದಿರುವ ಯೋಜನೆಗಳ ಮಾಹಿತಿಯನ್ನು ಪಡೆಯಲಾಯಿತು. ಪುಲಗೂರಕೋಟೆಗೆ ಸಂಬಂದಿಸಿದಂತೆ ಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡುತ್ತಿರುವ ಸಮಯದಲ್ಲಿ ಜಿ.ಪಂ.ಸದಸ್ಯ ಗೋವಿಂದಸ್ವಾಮಿ ಮಧ್ಯಪ್ರವೇಶಿಸಿ ಪಿಡಿಒ ಅಧಿಕಾರಿ ಮಾಹಿತಿಯಲ್ಲಿ ಯಾವುದು ಸರಿಯಲ್ಲವೆಂದು, ಇವೆಲ್ಲವೂ ತಪ್ಪು ಮಾಹಿತಿ ಎಂದು ಅಧಿಕಾರಿಯ ವಿರುದ್ಧ ಕಿಡಿಕಾರಿದರು. ತಪ್ಪು ಮಾಹಿತಿಯನ್ನು ನೀಡದೆ ಸರಿಯಾದ ಮಾಹಿತಿ ನೀಡುವಂತೆ ಆದೇಶಿಸಿದರು.
ಸರ್ಕಾರವು ಸಾರ್ವಜನಿಕರು ಖಾತೆ ಬದಲಾವಣೆ, ಪಿಂಚಣಿಗಾಗಿ ಪ್ರತಿದಿನ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ತಾಲೂಕು ಆಡಳಿತ ಯಂತ್ರಾಂಗವನ್ನೆ ಕುಂದುಕೊರತೆ ಸಭೆ,ಕಂದಾಯ ಅದಾಲತ್, ಪಿಂಚಣಿ ಕಾರ್ಯಕ್ರಮಗಳ ಮೂಲಕ ಮನೆಯಂಗಳಕ್ಕೆ ತಂದಿದ್ದು, ಈ ಕಾರ್ಯಕ್ರಮಗಳಲ್ಲಿ ಅರ್ಜಿದಾರರು ತಮ್ಮ ಅರ್ಜಿಗಳನ್ನು ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.ತಹಶೀಲ್ದಾರ್ ರಾಜೀವ್,ಯಲ್ದೂರು ಕ್ಷೇತ್ರ ಜಿ.ಪಂ.ಸದಸ್ಯ ಗೋವಿಂದಸ್ವಾಮಿ,ತಾ.ಪಂ.ಅಧ್ಯಕ್ಷ ನರೇಶ್, ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜು, ನೆಲವಂಕಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ,ಪುಲುಗೋರಕೋಟೆ ಗ್ರಾ.ಪಂ.ಅಧ್ಯಕ್ಷೆ ಅಮರಾವತಿ,ಲಕ್ಷ್ಮೀಪುರ ಗ್ರಾ.ಪಂ.ಅಧ್ಯಕ್ಷೆ ಮಂಜುಳ,ರಾಜಸ್ವನಿರೀಕ್ಷಕ ಗುರುಪ್ರಸಾದ್ , ನೆಲವಂಕಿ ಪಿಡಿಒ ಚಂದ್ರಶೇಖರ್ ಹಾಗು ಇತರರಿದ್ದರು.
