ಧಾಮರ್ಿಕ ಸಂಸ್ಥೆಗಳಿಗೆ ರಾಜಕೀಯ ತರಬೇತಿ ಸರಕಾರಕ್ಕೆ ನಾಣಯ್ಯ ಎಚ್ಚರಿಕೆ
ಸುದ್ದಿ9 ಕೈಕಂಬ;;
ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಧಾಮರ್ಿಕ ಸಭೆ ಸರಕಾರಗಳು, ರಾಜಕೀಯ ವ್ಯಕ್ತಿಗಳು ಧಾಮರ್ಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸಬಾರದು. ಅಕಾರಿಗಳ ಅಥವಾ ವ್ಯವಸ್ಥಾಪನಾ ಸಮಿತಿ ನೇಮಕದ ವೇಳೆ ರಾಜಕೀಯ ಬೆಂಬಲಿತ ವ್ಯಕ್ತಿಗಳನ್ನೇ ನೇಮಿಸಬೇಕು*. ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಅವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನದ ಬ್ರಹ್ಮ-ಕಲಶೋತ್ಸವ ಪ್ರಯುಕ್ತ ಸಂಪನ್ನಗೊಂಡ ಧಾಮರ್ಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ಧ ಸಚಿವ ಅಭಯಚಂದ್ರ ಜೈನ್ ಅವರನ್ನುದ್ಧೇಶಿಸಿ ಮಾತನಾಡಿದ ನಾಣಯ್ಯ *ಮಾನ್ಯ ಸಚಿವ ಅಭಯಚಂದ್ರ ಅವರೇ ದಯವಿಟ್ಟು ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟಕ್ಕೆ ಈ ಬಗ್ಗೆ ಮನವರಿಕೆ ಮಾಡುವುದಲ್ಲದೆ ನಂಬಿಕೆಗಳ ಬಗ್ಗೆ ರಾಜಕೀಯ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳವ ನಿಟ್ಟಿನಲ್ಲೂ ತಾವು ಜವಾಬ್ದಾರಿ ವಹಿಸಬೇಕು* ಎಂದರು. *ಧಾಮರ್ಿಕ ಕೇಂದ್ರಗಳಿಂದ ಯಾವುದೇ ಸರಕಾರಗಳು ಸಂಪನ್ಮೂಲ ಸಂಗ್ರಹಿಸಿವೆಯೇ ಹೊರತು ಯಾವುದೇ ಪ್ರಾಚೀನ, ಪುರಾತನ ಧಾಮರ್ಿಕ ಕೇಂದ್ರಗಳನ್ನು ಸರಕಾರವೇ ಅಭಿವೃದ್ಧಿಪಡಿಸಿದ ಉದಾಹರಣೆಗಳಿಲ್ಲ ಮುಂದೆ ಈ ವ್ಯವಸ್ಥೆ ಬದಲಾಗಲಿ.* ಎಂದು ಅವರು ಹೇಳಿದರು.
ಅವಧಾನಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರು ಧಾಮರ್ಿಕ ಸಭೆ ಉದ್ಘಾಟಿಸಿ ಧಾಮರ್ಿಕ ಉಪನ್ಯಾಸ ನೆರವೇರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು *ಹಿಂಗಾರ ಸಿರಿ* ಅರಳಿಸಿ *ಕಳಸೆ*ಯಲ್ಲಿಟ್ಟು ಸಾಂಪ್ರದಾಯಿಕ ಚಾಲನೆ ನೀಡಿ ಮಾತನಾಡಿ- *ಮೂಲನಂಬಿಕೆಗಳನ್ನು ಮೂಢನಂಬಿಕೆಗಳೆಂದು ವ್ಯಾಖ್ಯಾನಿಸುವವರನ್ನು ನಂಬಿಕೆ ಮೂಢರೆನ್ನಬಹುದು* ಎಂದರು.
ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣರ್ೇಶ್ವರೀ ದೇವಳದ ಧರ್ಮದಶರ್ಿ ಶ್ರೀ ನಿರಂಜನ ಸ್ವಾಮೀಜಿ ಅವರು ಶುಭ ಹಾರೈಸಿದರು.
ಸಚಿವ ಕೆ. ಅಭಯಚಂದ್ರ ಜೈನ್, ಶಾಸಕರುಗಳಾದ ಮೊದಿನ್ ಬಾವಾ, ಗಣೇಶ್ ಕಾಣರ್ಿಕೆ, ಮೋನಪ್ಪ ಭಂಡಾರಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇಲ್ಲಿನ ವಿಶ್ರಾಂತ ಕುಲಪತಿಗಳಾದ ಡಾ| ಬಲವೀರ ರೆಡ್ಡಿ, ಶ್ರೀದೇವಿ ಸಮೂಹ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಸದಾನಂದ ಶೆಟ್ಟಿ, ಕೆಪಿಸಿಸಿ ಪ್ರಚಾರ ಹಾಗೂ ಪ್ರಣಾಳಿಕೆ ಸಮಿತಿ ಸಂಚಾಲಕ ಎಸ್.ವಿ.ಅಮೀನ್, ಮುಂಬಾ ಉದ್ಯಮಿ ಭಾಸ್ಕರ ಶೆಟ್ಟಿ, ಎಸ್.ಕೆ.ಪೂಜಾರಿ ಮಸ್ಕತ್, ಮೆಸ್ಕಾಂ ಅಕಾರಿ ಗೋವಿಂದಪ್ಪ, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಅಕಾರಿಗಳಾದ ನಾಗರಾಜ್, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ಧರು.
ಕ್ಷೇತ್ರದ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಸುರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಸುರೇಶ್ ಅಂಚನ್ ವಂದಿಸಿದರು. ದಯಾನಂದ ಕತ್ತಲ್ಸಾರ್ ಕಾರ್ಯಕ್ರಮ ನಿರೂಪಿಸಿದರು.






