ಬಂಟ್ವಾಳ: ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ವಲಯದ ಕುಕ್ಕಿಪಾಡಿಯಲ್ಲಿ ನೇಸರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಕುಕ್ಕಿಪಾಡಿ ಶ್ರೀ ಸತ್ಯನಾರಾಯಣ ಭಜನ ಮಂಡಳಿ ವಠಾರದಲ್ಲಿ ಜರಗಿತು.

skdrdp
ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಅವರು ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿ, ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು. ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಗೋಂಜ ಅವರು ಅಧ್ಯಕ್ಷತೆ ವಹಿಸಿದ್ದರು. ವಾಮದಪದವು ಸ.ಪ.ಪೂ. ಕಾಲೇಜು ಉಪನ್ಯಾಸಕಿ ಸಂಧ್ಯಾ ಅವರು ಮಹಿಳಾ ಸಬಲೀಕರಣ ಕುರಿತು ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಸಿದ್ದಕಟ್ಟೆ ವಲಯಾಧ್ಯಕ್ಷ ಸದಾನಂದ ಶೀತಲ ಅವರು ಶುಭಹಾರೈಸಿದರು. ಒಕ್ಕೂಟ ಅಧ್ಯಕ್ಷೆ ಸುಜಾತಾ, ನಿಕಟಪೂರ್ವ ಅಧ್ಯಕ್ಷೆ ಜಲಜಾಕ್ಷಿ, ಪ್ರಗತಿಪರ ಕೃಷಿಕ ಸದಾನಂದ ಶೆಟ್ಟಿ, ರಾಜು ಶೆಟ್ಟಿ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ತಾಲೂಕು ಜ್ಞಾನ ವಿಕಾಸ ಸಮನ್ವಯಾ„ಕಾರಿ ಸಪ್ನಾ, ಸೇವಾ ಪ್ರತಿನಿ„ಗಳಾದ ಹೇಮಲತಾ, ತಾರಾನಾಥ್ ಉಪಸ್ಥಿತರಿದ್ದರು.
ವಿದ್ಯಾ ಸ್ವಾಗತಿಸಿದರು,ಭಾರತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಸುಮಾ ವಂದಿಸಿದರು.

By suddi9

Leave a Reply

Your email address will not be published. Required fields are marked *