ಬಂಟ್ವಾಳ: ರಾಷ್ಟ್ರೀಯ  ಎನ್.ಆರ್‌.ಎಲ್.ಎಂ. ಸಂಜೀವಿನಿ ಯೋಜನೆಯ ಕುರಿತು ಬಂಟ್ವಾಳ     ತಾಲೂಕು ಪಂಚಾಯತ್ ವತಿಯಿಂದ
  ತಾಲೂಕಿನ ಎಂ.ಬಿ.ಕೆ, ಬಿ.ಆರ್.ಪಿ, ಎಲ್.ಸಿ.ಆರ್.ಪಿ, ಎಂ.ಸಿ.ಆರ್.ಪಿ ಮತ್ತು ಪಂಚಾಯತ್ ಮಟ್ಟದ ಸ್ವಸಹಾಯ ಸಂಘಗಳ ಅಧ್ಯಕ್ಷ ರು ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ಮಾಹಿತಿ ಕಾರ್ಯಗಾರ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
DSC_3574
 ಯೋಜನೆಯ ರಾಜ್ಯ ವ್ಯವಸ್ಥಾಪಕರಾದ ಎನ್.ಕೆ.ಆಲಿ.ಅವರ ಅಧ್ಯಕ್ಷ ತೆ ವಹಿಸಿ ಮಾತನಾಡಿ,
ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗದ ದೃಷ್ಟಿಯಿಂದ ಸರಕಾರ ಈ ಯೋಜನೆಯ ಮೂಲಕ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶ ಹೊಂದಿದೆ.ಪ್ರತಿಯೊಬ್ಬ ಸದಸ್ಯರು ಈ ಯೋಜನೆಯ ಮಾಹಿತಿ ಪಡೆದುಕೊಂಡು ಸ್ವಾವಲಂಬಿ ಗಳಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
DSC_3582
ರಾಜ್ಯ ಲೆಕ್ಕ ಪತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಝೀವಲ್ ಖಾನ್, ತಾ.ಪಂ.ಕಾರ್ಯನಿರ್ವಣಾಧಿಕಾರಿ ರಾಜಣ್ಣ, ತಾ.ಪಂ.ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ, ತಾಲೂಕು ಮೇಲ್ವಿಚಾರಕ ಕುಶಾಲಪ್ಪ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *