ಉಡುಪಿ; ಹಯಗ್ರೀವ ನಗರದ ಯಕ್ಷಗಾನ ಕಲಾಕೇಂದ್ರ ಸಂಪರ್ಕಿಸುವ ಟಾರು ರಸ್ತೆಯಲ್ಲಿ, ನಾಗರ ಹಾವಿನ ಕಳೇಬರ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ಚಲಿಸುತ್ತಿರುವ ವಾಹನದ ಚಕ್ರದಡಿ ಸಿಲುಕಿ ರಸ್ತೆ ದಾಟುತ್ತಿರುವ ನಾಗರ ಹಾವು ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ.20190615_145054

ಸ್ಥಳಿಯ ನಿವಾಸಿಯಾದ ಮುಸ್ಲಿಂ ಮಹಿಳೆಯೊರ್ವರು ನಾಗರ ಹಾವಿನ ಕಳೇಬರ ಕಂಡು, ಉಡುಪಿ ಜಿಲ್ಲಾ ನಾಗರೀಕ ಸಮಿತಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಪಂದಿಸಿದ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು, ಕಳೇಬರವನ್ನು ಹೊತ್ತು ತಂದು ಸಗ್ರಿ ವಾಸುಕಿ ಸುಭ್ರಮಣ್ಯ ಕ್ಷೇತ್ರದ ಅರ್ಚರಿಕರಿಗೆ ಸಮರ್ಪಿಸಿದ್ದಾರೆ. ಬಳಿಕ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗರ ಸಲಹೆ ಮೆರೆಗೆ, ಕ್ಷೇತ್ರದ ನಾಗಬನದ ಸನಿಹ ಅರ್ಚಕರು ನಾಗರ ಹಾವಿನ ಕಳೇಬರವನ್ನು ಸಮಿತಿಯ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೆರಿಸಿದ್ದಾರೆ. ನಂತರದ ಧಾರ್ಮಿಕ ಅಪರ ಕ್ರಿಯೆಗಳು ಮುಂದೆ ನಡೆಯಲು ಇದೆಯೆಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *