ಸುದ್ದಿ9ಉಳ್ಳಾಲ: ಬಸ್ ಹತ್ತುತ್ತಿದ್ದ ಮಹಿಳೆಯೋರ್ವರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಹಿಂಬದಿ ಚಕ್ರದಡಿಗೆ ಸಿಲುಕಿ ದಾರುಣ ಸಾವನ್ನಪ್ಪಿದ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಚೆಕ್ಪೋಸ್ಟ್ ಬಳಿ ಶನಿವಾರ ಮುಂಜಾನೆ 11 ಗಂಟೆಯ ಸುಮಾರಿಗೆ ಸಂಭವಿಸಿದೆ.
ಮೃತ ಮಹಿಳೆ ಕುಂಜತ್ತೂರು ನಿವಾಸಿಯಾಗಿದ್ದು ಮುಸ್ತಫಾ ಎಂಬವರ ಪತ್ನಿ ಎಂದು ತಿಳಿದುಬಂದಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ತಲಪಾಡಿ ಪೇಟೆಗೆ ಬಂದಿದ್ದ ಮಹಿಳೆ ಚೆಕ್ಪೋಸ್ಟ್ ಸಮೀಪ 42 ನಂಬ್ರದ `ಪದ್ಮ’ ಹೆಸರಿನ ಸಿಟಿಬಸ್ ಅನ್ನು ಹತ್ತಲು ಯತ್ನಿಸಿದ್ದು, ಈ ವೇಳೆ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದೇ ಘಟನೆಗೆ ಕಾರಣವೆನ್ನಲಾಗಿದೆ. ಬಸ್ ಏಕಾಏಕಿ ಮುಂದುವರಿದ ಕಾರಣ ಆಯತಪ್ಪಿ ಕೆಳಕ್ಕೆ ಜಾರಿದ ಮಹಿಳೆ ಬಸ್ಸಿನ ಹಿಂಬದಿ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

999p

999-

999--

By Suddi9

Leave a Reply

Your email address will not be published. Required fields are marked *