ಸುದ್ದಿ9ಮಂಗಳೂರು: ನಗರದ ವಿವಿಧ ಖಾಸಗಿ ಕಾಲೇಜಿನ ವಿದ್ಯಾಥರ್ಿನಿಯರ ಹೆಸರು ಮತ್ತು ಭಾವಚಿತ್ರ ಇರುವ ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಬರೆದು ಫೋಟೋ ಲಗತ್ತಿಸಿ ಅಪಲೋಡ್ ಮಾಡಿದ ವಿರುದ್ಧ ನಗರದ ಬಕರ್ೆ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಯುವತಿಯರ ನಾನಾ ಭಂಗಿಗಳ ಫೋಟೋ ಜತೆಯಲ್ಲಿ ಅಶ್ಲೀಲ ಪದಗಳನ್ನು ಬರೆದಿದ್ದು, ಇದನ್ನು ಗಮನಸಿದ ನಗರದ ಯುವತಿಯೊಬ್ಬಳು ಬಕರ್ೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಸೈಬರ್ ಕ್ರೈಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಆಗ್ರಹ: ಫೇಸ್ ಬುಕ್ನಲ್ಲಿ ಅಶ್ಲೀಲ ಪದಗಳನ್ನು ಅಪ್ಲೋಡ್ ಮಾಡಿರುವ ಕೃತ್ಯದಲ್ಲಿ ಭಾಗಿಯಾಗಿದವರನ್ನು ಕೂಡಲೇ ಪತ್ತೆಹಚ್ಚಿ ಕಾನೂನನ ಮೂಲಕ ಬಂಧಿಸಿ ಶಿಕ್ಷೆ ನಡಬೇಕು ಎಂದು ಎಬಿವಿಪಿ ಪೋಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಇದೇ ವಿಚಾರವಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿರುವ ಎಬಿವಿಪಿ ಕಾರ್ಯಕರ್ತರು ಸೈಬರ್ ಅಪರಾಧದಲ್ಲಿ ಭಾಗಿಯಾಗುತ್ತಿರುವವರನ್ನು ತಕ್ಷಣ ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಅಲ್ಲದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ತಡೆಯಲು ಕಠಿಣ ಕಾನೂನು ರೂಪಿಸಬೇಕು. ಮತ್ತು ಈ ಬಗ್ಗೆ ಪೊಲೀಸರಿಗೆ ನದರ್ೇಶನ ನಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಸೈಬರ್ ಅಪರಾಧವಾದ ಕಾರಣ ಆರೋಪಿಯನ್ನು ಪತ್ತೆಹಚ್ಚಲು ಮೂರು ದಿನಗಳು ಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ದಿನ ಕಳೆದರೂ ಆರೋಪಿಯನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಬಿವಿಪಿ ಎಚ್ಚರಿಕೆ ನಡಿದೆ.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದಶರ್ಿ ಜಯಪ್ರಕಾಶ್, ಸರ್ವಕಾಲೇಜ್ ವಿದ್ಯಾಥರ್ಿ ಸಂಘದ ಸ್ನಾತ್ತಕೋತರ ವಿಭಾಗದ ಅಧ್ಯಕ್ಷ ದುಗರ್ೇಶ್ ಪಾರೆಪ್ಪಾಡಿ, ಸಚಿನ್, ಪುಷ್ಪರಾಜ್, ಆಕಾಶ್, ಮುರಳಿ, ಸರ್ವಕಾಲೇಜು ವಿದ್ಯಾಥರ್ಿ ಸಂಘದ ಅಧ್ಯಕ್ಷ ಚಂದ್ರಕಾಂತ್ ನಿಯೋಗದಲ್ಲಿದ್ದರು.

