ಬಂಟ್ವಾಳ:ಬಂಟ್ವಾಳ ವಿದ್ಯಾಗಿರಿಯ ಬಿ.ಆರ್.ಎಂ.ಪಿ. ಶಾಲೆಯ ವಿದ್ಯಾರ್ಥಿಗಳು ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ಶನಿವಾರ ವಿವಿಧ ಕಾರ್‍ಯಕ್ರಮಗಳನ್ನು ಏರ್ಪಡಿಸಿದ್ದರು.
ಸಾಗರ ದಿನಾಚರಣೆಯ ಪ್ರಾಮುಖ್ಯತೆಯನ್ನು ಹೇಳುವ ಭಾಷಣ, ಸಮೂಹಗಾಯನ, ರಸಪ್ರಶ್ನೆಗಳನ್ನು ನಡೆಸಿ ಜಾಗೃತಿ ಮೂಡಿಸಿದರು.

DSC00486ಪ್ರವಾಸಿಗರಿಂದ ಸಾಗರಗಳು ಹೇಗೆ ಮಾಲಿನ್ಯಗೊಂಡು ಅಲ್ಲಿನ ಜೀವಿಗಳನ್ನು ಬಾಧಿಸುತ್ತವೆ ಎಂಬುದನ್ನು ಪ್ರಹಸನದ ಮೂಲಕ ಪ್ರದರ್ಶಿಸಿದರು. ಸಾಗರವನ್ನು ಮಾಲಿನ್ಯದಿಂದ ರಕ್ಷಿಸುವ ಕುರಿತಾದ ಘೋಷಣಾ ವಾಕ್ಯಗಳನ್ನು ಓದಿದರು.      ಶಾಲಾ ಪ್ರಿನ್ಸಿಪಾಲ್ ರಮಾಶಂಕರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ-ಶಿಕ್ಷಕಿಯರು ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಸುರೇಖಾ ರೈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಉಲ್ಲಾಸ್ ಕಾರ್‍ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *