ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಕೊಡಮಾಡಲಾದ ಬರೆಯುವ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಎಸ್‍ಡಿಎಂಸಿ ಅಧ್ಯಕ್ಷ ಶಶಿಕಾಂತ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರಗಿತು.
ಪುತ್ತಿಗೆ ಕ್ಷೇತ್ರದ ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ಅವರು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ಕಾಲದ ಬೇಡಿಕೆ, ಅನಿವಾರ್ಯಕ್ಕೆ ತಕ್ಕಂತೆ ಆಂಗ್ಲ ಮಾಧ್ಯಮವನ್ನು ಸ್ವಾಗತಿಸುವ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಮ್ಮ ಮಕ್ಕಳು ಭಾಷೆ, ಭಾಷೆಯೊಂದಿಗೆ ಹಾಸುಹೊಕ್ಕಾದ ಸಂಸ್ಕøತಿಯನ್ನು ಮೈಗೂಡಿಸುವುದೂ ಅವಶ್ಯವಾಗಿದೆ. ಅಂತೆಯೇ, ರಾಷ್ಟ್ರಭಾಷೆಯಾದ ಹಿಂದಿಯ ಬಗ್ಗೆ ವಿರೋಧ ವ್ಯಕ್ತಪಡಿಸದೆ ಅದನ್ನೂ ಕಲಿಯಲು ಮಕ್ಕಳಿಗೆ ಪೆÇ್ರೀತ್ಸಾಹ ನೀಡಬೇಕು ಎಂದರು. ಜಿಲ್ಲಾ ಪಂಚಾಯಿತಿಯಿಂದ ಶಾಲಾಭಿವೃದ್ಧಿಗಾಗಿ ರೂ. 1.66 ಲಕ್ಷ ಅನುದಾನವನ್ನು ಒದಗಿಸಿರುವುದಾಗಿ ಅವರು ಪ್ರಕಟಿಸಿದರು.
ಟ್ರಸ್ಟ್ ಸಂಚಾಲಕ ನರಸಿಂಹ ಮಡಿವಾಳ, ರಾಜೀವ ಶೆಟ್ಟಿ, ನಾರಾಯಣ ರೈ ಮುಖ್ಯ ಅತಿಥಿಗಳಾಗಿದ್ದರು.
ಸಿಆರ್‍ಪಿ ಗೋಪಾಲ್ ಟಿ., ನೀರ್ಕೆರೆ ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕ ಕರುಣಾಕರ , ವಿದ್ಯಾರ್ಥಿ ನಾಯಕ ಮುಖ್ಯಮಂತ್ರಿ ದಿನೇಶ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಯಮುನಾ ಕೆ. ಸ್ವಾಗತಿಸಿದರು. ಧನಂಜಯ ಮೂಡುಬಿದಿರೆ ವಿವೇಕಾನಂದ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಅಧ್ಯಕ್ಷರ ಪರಿಚಯ ನೀಡಿದರು. ಶಿಕ್ಷಕ ದಿನಕರ ನಿರೂಪಿಸಿದರು. ಶಿಕ್ಷಕ ಅನಂತ ವಂದಿಸಿದರು.

