ಬೆಂಗಳೂರು:ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ, ಹಿರಿಯ ಪತ್ರಕರ್ತ ಡಾ. ಶೇಖರ ಅಜೆಕಾರು ಮತ್ತು ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಎಸ್. ಅಜೆಕಾರು ದಂಪತಿಗೆ ರಾಣೆ ಬೆನ್ನೂರಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಜಾನಪದ ಲೋಕೋತ್ಸವ ಹಾಗೂ ಚಿನ್ನರ ಸಂಭ್ರಮದಲ್ಲಿ ಬಸವಶ್ರೀ ರಾಷ್ಟ್ರೀಯ ಸದ್ಭಾವನಾ ಆದರ್ಶ ದಂಪತಿ ಪ್ರಶಸ್ತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಪ್ರೊ. ಎ.ಸಿ. ಹಿರೇಮಠ ಸಹಿತ ಗಣ್ಯರು ಪ್ರದಾನಿಸಿದರು.

GRU_8399
ಬೆಳಗಾವಿ ಜಿಲ್ಲೆಯ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಮಂಡಳಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ವಿಶ್ವಗುರು ಬಸವಣ್ಣನ ಅಂಗವಾಗಿ ಒಂದು ದಿನದ ಲೋಕೋತ್ಸವ ಆಚರಿಸಿದ್ದು ನೂರಾರು ಜನಪದ ಕಲಾವಿದರು ತಮ್ಮ ಪ್ರದರ್ಶನ ನೀಡಿದರು.ಭಾರತಿ .ಕೆ. ಜಂಬಗಿ, ಸಿದ್ರಾಮ ಎಮ್.ನಿಜಲಗಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮುತ್ತಪ್ಪ ಅ.ಸವದಿ, ಹಸನಸಾಬ್ ಮೌ.ನಾದಾಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆರು ದಂಪತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

By suddi9

Leave a Reply

Your email address will not be published. Required fields are marked *