ಮೂಡುಬಿದಿರೆ: ಬೆಳುವಾಯಿ ಕರಿಯನಂಗಡಿಯ ಆಮಿಷ್ ಕಾಟೇಜ್ ನಿವಾಸಿ ಇಮ್ತಿಯಾಜ್ (51) ಕಳೆದ ಜೂನ್ 2ರಂದು ಮನೆಯಿಂದ ತೆರಳಿದವರು ಸಂಬಂಧಿಕರ ಮನೆಗೂ ಹೋಗದೇ ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಪತ್ನಿ ಶಾಹಿಸ್ತಾ ಬೇಗಂ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ಐದೂವರೆ ಅಡಿ ಎತ್ತರದ ಸಾಧಾರಣ ಎಣ್ಣೆಕಪ್ಪು ಶರೀರದ ಇಮ್ತಿಯಾಜ್ ಕನ್ನಡ, ತುಳು, ಉರ್ದು, ಇಂಗ್ಲೀಷ್, ಹಿಂದಿ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕಿದವರು ಪೋಲೀಸ್ ಆಯುಕ್ತರು ( 0824-2220801) ಅಥವಾ ಮೂಡುಬಿದಿರೆ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
