ಬಂಟ್ವಾಳ: ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ನಿಲ್ಲುವ ಬಸ್ ಬೇ ಮತ್ತು ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿ ಮಳೆ ನೀರು ರಸ್ತೆಯಲ್ಲೆ ನಿಲ್ಲುವುದು ಮತ್ತು ಹರಿದು ಹೋಗಲು ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ರಾಜೇಶ್ ನಾಯ್ಕ್ ಮತ್ತು ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಸಂದರ್ಭ ಪುರಸಭಾ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಅವರನ್ನು ಸ್ಥಳಕ್ಕೆ ಕರೆಸಿದ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ತಕ್ಷಣ ಸಮಸ್ಯೆ ಯನ್ನು ಬಗೆಹರಿಸುವ ನಿಟ್ಟಿನಲ್ಲಿ ನೀರು ನಿಲ್ಲದಂತೆ ಸಿಮೆಂಟ್ ಹಾಕಿ ಕ್ರಮಕೈಗೊಳ್ಳುವಂತೆ ಸೂಚಸಿದರು.
ಈ ಸಂದರ್ಭ ಪುರಸಭಾ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಅವರನ್ನು ಸ್ಥಳಕ್ಕೆ ಕರೆಸಿದ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ತಕ್ಷಣ ಸಮಸ್ಯೆ ಯನ್ನು ಬಗೆಹರಿಸುವ ನಿಟ್ಟಿನಲ್ಲಿ ನೀರು ನಿಲ್ಲದಂತೆ ಸಿಮೆಂಟ್ ಹಾಕಿ ಕ್ರಮಕೈಗೊಳ್ಳುವಂತೆ ಸೂಚಸಿದರು.

ಕಳೆದ ಹಲವು ಸಮಯದಿಂದ ಮಳೆಗಾಲದ ವೇಳೆ ಸ್ಟೇಟ್ ಬ್ಯಾಂಕ್ ಮುಂಭಾಗ ರಸ್ತೆಯಲ್ಲೇ ನೀರುನಿಂತು ಸಾರ್ವಜನಿಕರು ವಾಹನ ಚಾಲಕರು ತೊಂದೆರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಇಂದಿರಾ ಕ್ಯಾಂಟೀನ್ ಬಳಿಯಿಂದ ನೀರು ಹರಿದು ಹೋಗಲು ಅಗೆದ ಚರಂಡಿಯನ್ನು ಮುಚ್ಚದಿರುವುದರಿಂದ ಕೊಳಚೆ ನೀರು ಚರಂಡಿಯಲ್ಲೇ ನಿಲ್ಲುತಿತ್ತು. ಈ ಬಗ್ಗೆ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘದ ಆಶ್ರಯದಲ್ಲಿ ಚಾಲಕ ಸಮುದಾಯ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಇದೀಗ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಳೆ ಆರಂಭಕ್ಕೆ ಮುನ್ನವೇ ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ.ಸೋಜ, ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ನಗರ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಟ್ರಾಫಿಕ್ ಎಸ್.ಐ.ಮಂಜುನಾಥ್,ಪುರಸಭೆಯ ಸ್ಥಳೀಯ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಮಾಜಿ ಸದಸ್ಯರಾದ ಜನಾರ್ಧನ ಬೊಂಡಾಲ, ಸುರೇಶ್ ಕುಲಾಲ್,ಪಕ್ಷದ ಪ್ರಮುಖರಾದ ಪವನ್ ಕುಮಾರ್ ರಮಾನಾಥ ರಾಯಿ, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
Attachments area
