ಬಂಟ್ವಾಳ: ಲೋಕಸಭಾ ಚುನಾವಣೆಯಲ್ಲಿ 303. ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಭಾರಿಗೆ ಪ್ರಧಾನಿ ನರೆಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಸಿದ್ದಕಟ್ಟೆ ಯಿಂದ ಶ್ರೀಕ್ಸೆತ್ರ ಪೊಳಲಿ ಅಮ್ಮನ ನಡೆಗೆ ಬಿಜೆಪಿ ಕಾರ್ಯಕರ್ತರು ಭಾನುವಾರ ಪಾದಯಾತ್ರೆ ಮಾಡಿ ಹರಕೆ ಪೂರೈಸಿದರು. 300 ಕ್ಕೂ ಅಧಿಕ ಸ್ಥಾನಗಳಿಸಿ ಮೋದಿ ಪ್ರಧಾನಿಯಾದರೆ ಸಿದ್ದಕಟ್ಟೆಯಿಂದ ಶ್ರೀಕ್ಷೇತ್ರ ಪೊಳಲಿಗೆ ಹರಕೆ ಹೊತ್ತಿದ್ದು, ಸಿದ್ದಕಟ್ಟೆ ಮತ್ತು ಕರ್ಪೆ ಯಿಂದ 35 ಸುಮಾರು ಕ್ಕೂ ಹೆಚ್ಚು ಬಿ.ಜೆ.ಪಿ.ಕಾರ್ಯಕರ್ತ ರು ಹಾಗೂ ಮೋದಿ ಅಭಿಮಾನಿಗಳು ಪೊಳಲಿ ಶ್ರೀ ರಾಜರಾಜೆಶ್ವರಿ ಕ್ಸೆತ್ರಕ್ಕೆ ಪಾದಯಾತ್ರೆ ಮೂಲಕ ತೆರಳಿ ಅಮ್ಮನ ದರ್ಶನ ಪಡೆದು ಮೋದಿಗೆ ಇನ್ನಷ್ಟು ಆರೋಗ್ಯ,ಅಯೂಷ್ಯ ವೃದ್ದಿಸಿ,ಶೀಘ್ರ ವೆ ಭಾರತ ಜಗದ್ಗುರುವಾಗುವಂತೆ ಬೇಡಿಕೊಂಡರು.
.ಪಾದಯಾತ್ರೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು,ಗ್ರಾಮ ಪಂಚಾಯತ್ ಸದಸ್ಯರಾದ ಮಾದವ ಶೆಟ್ಟಿಗಾರ್,ಎಸ್.ಪಿ.ಶ್ರೀದರ್ , ಕರ್ಪೆ ಬಿ.ಜೆ.ಪಿ. ಬೂತ್ ಕಾರ್ಯದರ್ಶಿ ನವೀನ ಪೂಜಾರಿ ಮೋದಿ ಅಭಿಮಾನಿಗಳಾದ ಅಶೊಕ ಸಪಲ್ಯ, ಗುರುಪ್ರಸಾದ್,ರಾಜೆಶ್ ಶೆಟ್ಟಿ,ಪದ್ಮನಾಭ ಗುಜರಾನ್,ಶೇಖರ ಮಡಕುಂಜ, ಬೋಜ ಶೆಟ್ಟಿಗಾರ್,ದಿವಾಕರ,ಭರತ್,ಹರೀಶ ಮತ್ತಿತರರು ಭಾಗವಹಿಸಿದ್ದರು.

