ಬಂಟ್ವಾಳ:ದೇಶದಲ್ಲಿ ವಿರೋಧ ಪಕ್ಷಗಳ ಅನಗತ್ಯ ಮತ್ತು ಅನಾಗರಿಕ ಟೀಕೆಗಳ ನಡುವೆಯೂ ಜನತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡನೇ ಬಾರಿಗೆ ಆಡಳಿತಕ್ಕೆ ತಂದಿದ್ದಾರೆ. ಮೋದಿ ಅವರು ದೇಶ ಸುಭದ್ರಗೊಳಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆ ಕೂಡಾ ಅವರಂತೆ ದೇಶದ ಪ್ರಗತಿಗೆ ಶ್ರಮಿಸುವ ಪಣ ತೊಡಬೇಕು ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ಇಲ್ಲಿನ ಕೊಯಿಲದಲ್ಲಿ ರಾಯಿ-ಕೊಯಿಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

2btl-Bjp
ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಜಗತ್ತಿನಲ್ಲಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸುವ ಸಾಮಥ್ರ್ಯ ಪ್ರಧಾನಿ ಮೋದಿ ಅವರಲ್ಲಿದೆ. ಇದರಿಂದಾಗಿ ಜಗತ್ತು ಭಾರತದ ಕಡೆಗೆ ಕುತೂಹಲದಿಂದ ದಿಟ್ಟಿಸಿ ನೋಡುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಬಿಜೆಪಿ ಆಡಳಿತಕ್ಕೆ ಒಳಪಡಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಪಿ.ಶ್ರೀಧರ ಸಿದ್ಧಕಟ್ಟೆ, ಕುಸುಮಾ ಅಣ್ಣಳಿಕೆ, ಪ್ರಮುಖರಾದ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಕೆ.ಪರಮೇಶ್ವರ ಪೂಜಾರಿ ರಾಯಿ ಮತ್ತಿತರರು ಶುಭ ಹಾರೈಸಿದರು.
ಪ್ರಮುಖರಾದ ರಮಾನಾಥ ರಾಯಿ, ಸಂತೋಷ್ ಕುಮಾರ್ ಬೆಟ್ಟು, ಹರೀಶ ಆಚಾರ್ಯ ರಾಯಿ, ಪದ್ಮನಾಭ ಗೌಡ, ಪುಷ್ಪಲತಾ, ಹರೀಶ ಪೂಜಾರಿ, ಪ್ರವೀಣ ಅಂಚನ್ ಮತ್ತಿತರರು ಇದ್ದರು.
ದಿನೇಶ ಸುವರ್ಣ ಕುದ್ಕೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *