ಬಂಟ್ವಾಳ; ಪಾಣೆಮಂಗಳೂರು ರೈತರ ಸೇವಾ ಸಹಕಾರ ಸಂಘ ನಿ , ಪಾಣೆಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ 13 ಸ್ಥಾನಗಳ ಚುನಾವಣೆಯಲ್ಲಿ ಸಹಕಾರಿ ಭಾರತಿಯ 13 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ . ಸಂಘದ ಮುಖ್ಯ ಕಛೇರಿಂತಲ್ಲಿ ನಡೆದ ಚುನಾವಣೆಯಲ್ಲಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಜಯಶಂಕರ ಬಾಸ್ರಿತ್ತಾಯ , ವೆಂಕಟೇಶ್ವರ ಭಟ್ ,ಶ್ರೀನಿವಾಸ ಭಟ್ , ಜ್ಞಾನೇಶ್ವರ ಪ್ರಭು , ವಿಜಯ ರೈ , ಪ್ರದೀಪ್ ಶೆಟ್ಟಿ ಆಯ್ಕೆಯಾಗಿರುತ್ತಾರೆ .
ಹಿಂದುಳಿದ ಪ್ರವರ್ಗ ‘ ಎ ‘ ಸ್ಥಾನದಿಂದ ಕೇಶವ ಪಿ ಮತ್ತು ಸುರೇಶ್ , ಮಹಿಳಾ ಮೀಸಲು ಕ್ಷೇತ್ರದಿಂದ ಮಮತಾ ಮತ್ತು ಮೋಹಿನಿ ಬಿ ಶೆಟ್ಟಿ ಅವರು ಆಯ್ಕೆಯಾಗಿರುತ್ತಾರೆ . ಸಾಲಗಾರರಲ್ಲದ ಕ್ಷೇತ್ರದಿಂದ ಗಣೇಶ್ ಚುನಾಯಿತರಾಗಿದ್ದು,ಪರಿಶಿಷ್ಟ ಜಾತಿ ಕ್ಷೇತ್ರದಿಂದ ರತ್ನಾ ಮತ್ತು ಪರಿಶಿಷ್ಟ ಪಂಗಡ ಸ್ಥಾನದಿಂದ ನಾಗಪ್ಪ ನಾಯ್ಕ ರವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
