ಬಂಟ್ವಾಳ : ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ಶ್ರೀ ರಾಮನಗರ ಶಿವಾಜಿ ಬಳಗ ಇದರ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಧ್ವ ಶ್ರೀ ಕೊಡಮಣಿತ್ತಾಯಿ ದೈವಸ್ಥಾನದ ಬಳಿ ಮೇ 26ರಂದು ಜರಗಿತು.

2805pkt1
ಖ್ಯಾತ ವಾಗ್ಮಿ, ಚಿಂತಕ ಜಿತಿನ್ ಮಂಗಳೂರು ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ಆದರ್ಶಯುತ ಧ್ಯೆಯೋದ್ದೇಶಗಳನ್ನಿರಿಸಿ ಸಮಾಜಮುಖಿಯಾಗಿ ನಡೆಯುವ ಸಂಘಟನೆಗಳು ಮಾದರಿಯಾಗಿದೆ. ದೈವ ದೇವರ ಅನುಗ್ರಹ, ಗುರು, ಹಿರಿಯರ ಅಶೀರ್ವಾದದಿಂದ ಸಂಘಟನೆಗಳು ಬಲಯುತವಾಗುತ್ತದೆ ಎಂದ ಅವರು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಪೆÇೀಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅವರು ನೆರವೇರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸುರೇಂದ್ರ ಪೂಜಾರಿ ಮಧ್ವ ವಹಿಸಿದ್ದರು.

2805pkt2
ಕಾವಳಪಡೂರು ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಶ್ರೀಧರ್ ಮಧ್ವ, ಪ್ರಮುಖರಾದ ರಮೇಶ್ ಆಚಾರ್ಯ,ಶಿವಪ್ಪ ಗೌಡ ನಿನ್ನಿಕಲ್ಲು, ರಾಜ್ ಪ್ರಸಾದ್ ಆರಿಗ,ಚಂದ್ರಶೇಖರ್ ಕರ್ಣ, ವೀರೇಂದ್ರಅಮೀನ್, ಶಿವಾಜಿ ಬಳಗ ಅಧ್ಯಕ್ಷ ಯತೀಶ್ ಪೂಜಾರಿ, ಗೌರವಾಧ್ಯಕ್ಷ ಪ್ರಕಾಶ್ ಎಂ.,ಸ್ಥಾಪಕಾಧ್ಯಕ್ಷ ನಾಗೇಶ್ ಮಧ್ವ, ಪದಾ„ಕಾರಿಗಳಾದ ಧನುಷ್, ಮಂಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯ„ಕ ಅಂಕ ಗಳಿಸಿದ ಯತೀನ್ ಮತ್ತು ರಕ್ಷಾ ಅವರನ್ನು ಸಮ್ಮಾನಿಸಲಾಯಿತು. ಪರಿಸರದ ಸುಮಾರು 60 ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಯತೀಶ್ ಪೂಜಾರಿ ಸ್ವಾಗತಿಸಿದರು. ಸಂದೇಶ್ ವಂದಿಸಿದರು. ಉಪನ್ಯಾಸಕ ಶಿವರಾಜ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *