ಜೇಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಘಟಕದ ಸದಸ್ಯರಿಗಾಗಿ “ನಿನ್ನನ್ನು ನೀನು ತಿಳಿ” ಎಂಬ ವಿಷಯದ ಬಗ್ಗೆ ವಲಯ ನಿರ್ದೇಶಕರು-ಕಾರ್ಯಕ್ರಮ, ವಲಯ 15 ಹಾಗೂ ಜೇಸಿಐ ಇಂಡಿಯಾ ಇದರ ವಲಯ ತರಬೇತುದಾರರಾದ ಜೇಸಿಐ ಸೆನೆಟರ್ ಡಾ| ರಾಘವೇಂದ್ರ ಹೊಳ್ಳ ಇವರಿಂದ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಬಂಟ್ವಾಳ ತಾಲ್ಲೂಕಿನ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು ಇತ್ತೀಚೆಗೆ ನಡೆದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಜಯಗೋವಿಂದ (611 ಅಂಕ), ಮಾಣಿಲ ಸರಕಾರಿ ಪ್ರೌಢಶಾಲೆಯ ಅನನ್ಯಾ (600 ಅಂಕ), ಹಾಗೂ ಸಾಲೆತ್ತೂರು ಸರಕಾರಿ ಪ್ರೌಢಶಾಲೆಯ ಸೃಷ್ಟಿ ಕೆ.ಕೆ. (600 ಅಂಕ), ಇವರ ಸಾಧನೆಯನ್ನು ಗುರುತಿಸಿ ಫಲ ಪುಷ್ಪ, ಶಾಲು ಹಾಗೂ ಪ್ರಶಸ್ತಿ ಫಲಕದೊಂದಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೇಸಿ ಅಧ್ಯಕ್ಷರಾದ ಹರ್ಷರಾಜ್ ಸಿ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಜೇಜೇಸಿ ಅಧ್ಯಕ್ಷ ರೋನಿತ್ ಬಿ.ಜೆ. ಹಾಗೂ ಘಟಕದ ಇತರೇ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

