ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 25 ಸ್ಥಾನ ಪಡೆದಿದ್ದು, ಪ್ರಸ್ತುತ ರಾಜ್ಯದಲ್ಲಿ ಮೈತ್ರಿ ಸರ್ಕಾರ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನವನ್ನು ಪಡೆದುಕೊಂಡಿದೆ. ದೇಶದಲ್ಲಿ ಮೋದಿ ಅಲೆಯ ಪ್ರಭಾವ, ರಾಜ್ಯ ನಾಯಕರ ಸಮರ್ಥ ಪ್ರಚಾರ, ಕಾರ್ಯಕರ್ತರ ಪಾತ್ರದಿಂದ ಮತದಾರ ಬಿಜೆಪಿಗೆ ಜೈ ಎಂದಿದ್ದು, ಬಿಜೆಪಿಯನ್ನು ಒಂದಂಕಿಗೆ ತಂದು ನಿಲ್ಲಿಸುವ ಪಣ ತೊಟ್ಟಿದ ದೋಸ್ತಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

suddi 9 lokh sabha 2019
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ 23 ಮೂರು ಕ್ಷೇತ್ರಗಳನ್ನು ಗೆಲುವ ವಿಶ್ವಾಸವನ್ನು ಚುನಾವಣೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದು, ಬಿಜೆಪಿ ನಿರೀಕ್ಷೆ ಮೀರಿ 25 ಸ್ಥಾನಗಳನ್ನು ಪಡೆದುಕೊಂಡಿದೆ. ಹೈವೋಲ್ಟೆಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಕೂಡ ಗೆಲುವು ಸಾಧಿಸಿದ್ದು ಬಿಜೆಪಿ ಪಾಳಯದಲ್ಲಿ ನವ ಚೈತನ್ಯ ನೀಡಿದೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‍ಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಬಿಜೆಪಿ ಸ್ಪಷ್ಟ ಬಹುಮತವಿಲ್ಲದೆ ರಾಜ್ಯದ ಆಡಳಿತವನ್ನು ಹಿಡಿಯುವಲ್ಲಿ ವಿಫಲವಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೇಡು ತೀರಿಸಿಕೊಂಡಿದ್ದು, ಮತದಾರರನ ಮತ, ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿದೆ.

ಬಿಜೆಪಿಯಿಂದ ಆಯ್ಕೆಯಾದ 25 ಸಂಸದರು:
ಪ್ರತಾಪ್ ಸಿಂಹ (ಮೈಸೂರು)
ನಳಿನ್ ಕುಮಾರ್ ಕಟೀಲು( ದ.ಕ ಜಿಲ್ಲೆ)
ಶೋಭಾ ಕರಂದ್ಲಾಜೆ( ಉಡುಪಿ-ಚಿಕ್ಕಮಗಳೂರು)
ವೈ. ದೇವೇಂದ್ರಪ್ಪ( ಬಳ್ಳಾರಿ)
ಅಣ್ಣಾ ಸಾಹೇಬ್ ಜೊಲ್ಲೆ (ಚಿಕ್ಕೋಡಿ)
ಅನಂತ್ ಕುಮಾರ್ ಹೆಗಡೆ(ಉತ್ತರ ಕನ್ನಡ)
ಡಿ.ವಿ. ಸದಾನಂದ ಗೌಡ(ಬೆಂಗಳೂರು ಉತ್ತರ)
ಪ್ರಲ್ಹಾದ್ ಜೋಷಿ(ಧಾರವಾಡ)
ಬಿ.ವೈ. ರಾಘವೇಂದ್ರ(ಶಿವಮೊಗ್ಗ)
ವಿ. ಶ್ರೀನಿವಾಸ ಪ್ರಸಾದ್( ಚಾಮರಾಜನಗರ)
ಮುನಿಸ್ವಾಮಿ( ಕೋಲಾರ)
ಕರಡಿ ಸಂಗಣ್ಣ (ಕೊಪ್ಪಳ)
ಸುರೇಶ್ ಅಂಗಡಿ (ಬೆಳಗಾವಿ)
ಜಿ.ಎಂ. ಸಿದ್ದೇಶ್ವರ( ದಾವಣಗೆರೆ)
ಎ. ನಾರಾಯಣಸ್ವಾಮಿ(ಚಿತ್ರದುರ್ಗ)
ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ)
ಉಮೇಶ್ ಜಾಧವ್ (ಕಲಬುರ್ಗಿ)
ರಮೇಶ್ ಜಿಗಜಿಣಗಿ(ವಿಜಯಪುರ)
ಸಿ.ಜಿ. ಬಸವರಾಜು, ಬಿಜೆಪಿ (ತುಮಕೂರು)
ಪಿ.ಸಿ. ಮೋಹನ್ ( ಬೆಂಗಳೂರು ಸೆಂಟ್ರಲ್)
ಪಿ.ಸಿ. ಗದ್ದಿಗೌಡರ್(ಬಾಗಲಕೋಟೆ)
ಶಿವಕುಮಾರ್ ಉದಾಸಿ (ಹಾವೇರಿ)
ಭಗವಂತ್ ಖೂಬಾ (ಬೀದರ್)
ಕೆ. ಶಿವನಗೌಡ ನಾಯ್ಕ್ (ರಾಯಚೂರು)

ಪಕ್ಷೇತರ:
ಸುಮಲತಾ ಅಂಬರೀಷ್( ಮಂಡ್ಯ)

ಜೆಡಿಎಸ್:
ಪ್ರಜ್ವಲ್ ರೇವಣ್ಣ(ಹಾಸನ)
ಕಾಂಗ್ರೆಸ್:
ಡಿ.ಕೆ. ಸುರೇಶ್( ಬೆಂಗಳೂರು ಗ್ರಾಮಾಂತರ)

By suddi9

Leave a Reply

Your email address will not be published. Required fields are marked *